
ಗುವಾಹಟಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗಾಯಕ ಜುಬೀನ್ ಗರ್ಗ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ರಾಹುಲ್, ಗರ್ಗ್ ಅವರ ಕುಟುಂಬ ಮತ್ತು ಅಸ್ಸಾಂನ ಜನರಿಗೆ ಸಿಂಗಪುರದಲ್ಲಿ ಜುಬೀನ್‌ಗೆ ಏನಾಯಿತು? ಎಂದು ತಿಳಿದುಕೊಳ್ಳುವ ಹಕ್ಕಿದೆ ಎಂದು ತಿಳಿಸಿದ್ದಾರೆ.
ಜುಬೀನ್ ಗರ್ಗ್ ಪ್ರಕರಣದಲ್ಲಿ ಸತ್ಯ ಆದಷ್ಟು ಬೇಗ ಹೊರಬರುವುದು ಉತ್ತಮ. ಏಕೆಂದರೆ ಕುಟುಂಬಕ್ಕೆ ಈ ಬಗ್ಗೆ ನೋವು ಹೆಚ್ಚಿದೆ. ಸಿಂಗಪುರದಲ್ಲಿ ನಿಜವಾಗಿ ಆಗಿದ್ದೇನು? ಎಂಬುವುದರ ಸಂಪೂರ್ಣ ಘಟನೆಯ ಚಿತ್ರಣವನ್ನು ಅಸ್ಸಾಂ ಸರ್ಕಾರ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಗರ್ಗ್ ಸಾವಿಗೆ ನ್ಯಾಯ ದೊರೆಕಿಸಬೇಕು ಎಂದು ರಾಹುಲ್ ಹೇಳಿದ್ದಾರೆ.
ಕುಟುಂಬವು ಈಗ ಗರ್ಗ್ ಅವರನ್ನು ಕಳೆದುಕೊಂಡಿದೆ. ಗರ್ಗ್ ಸಾವಿನ ಅಸಲಿ ಕಾರಣ ಹೊರಬರಬೇಕೆಂದು ಕುಟುಂಬ ಕೋರುತ್ತಿದೆ ಎಂದು ರಾಹುಲ್ ತಿಳಿಸಿದ್ದಾರೆ.
ಸೆಪ್ಟೆಂಬರ್ 19 ರಂದು ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದ ವೇಳೆ ಜುಬೀನ್ ಅವರು ಉಸಿರುಗಟ್ಟಿ ಮೃತಪಟ್ಟಿದ್ದರು.
ಇದಕ್ಕೂ ಮೊದಲು ರಾಹುಲ್ ಸೋನಾಪುರದಲ್ಲಿರುವ ಗಾಯಕ ಜುಬೀನ್ ಗರ್ಗ್ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.