ADVERTISEMENT

ಬೆಟ್ಟದಪುರ: ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 23:00 IST
Last Updated 1 ನವೆಂಬರ್ 2025, 23:00 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಬೆಟ್ಟದಪುರ (ಮೈಸೂರು ಜಿಲ್ಲೆ): ಗ್ರಾಮದ ಸುಣ್ಣದಬೀದಿಯ ನಿವಾಸಿ ಜಮೃದ್ ಷರೀಫ್ ಅವರ ಪುತ್ರಿ ಅರ್ಬಿಯಾ ಬಾನು (25) ಅವರು ಶನಿವಾರ ಮಕ್ಕಳಾದ ಅನಂ ಫಾತಿಮಾ (2) ಮತ್ತು 8 ದಿನದ ಶಿಶುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡರು.

ADVERTISEMENT

‘ಚಾಕುವಿನಿಂದ ಮಕ್ಕಳ ಕತ್ತು ಕೊಯ್ದಿದ್ದು, ತಾವೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನಿಸಿದ ಎರಡೂ ಮಕ್ಕಳು ಹೆಣ್ಣೇ ಆದ್ದರಿಂದ ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆಯ ತಂದೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಅರೇನಹಳ್ಳಿಯ ಸೈಯದ್ ಮುಸಾವೀರ್–ಅರ್ಬಿಯಾ ಬಾನು ದಂಪತಿಯ ಮೊದಲ ಮಗಳು ಅಂಗವಿಕಲೆಯಾಗಿದ್ದಳು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚರಂಡಿಗೆ ಬಿದ್ದು ಮಗು ಸಾವು

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮಾದನ ಹಿಪ್ಪರಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ ಅವರ ಮಗಳು ಶ್ರಾವಣಿ (3) ಮೃತಳು. ಮನೆ ಮುಂದೆ ಮಗು ಆಟವಾಡುತ್ತಿತ್ತು. ಮಗುವಿನ ಸಪ್ಪಳ ಕೇಳದಿದ್ದಾಗ ಹುಡುಕಾಡಿದ್ದು, ಮುಖ್ಯ ರಸ್ತೆಗೆ ನಿರ್ಮಿಸಿದ್ದ ಚರಂಡಿಯಲ್ಲಿ ಮಗುವಿನ ಶವ ಕಂಡುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.