ADVERTISEMENT

ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದಲ್ಲಿ ಅಧ್ಯಕ್ಷನ ವಿರುದ್ಧ ಸೈನಿಕರ ದಂಗೆ?

ಅಧ್ಯಕ್ಷರ ಪದಚ್ಯುತಿಗೊಳಿಸಿರುವುದಾಗಿ ಘೋಷಿಸಿದ್ದ ಸೈನಿಕರ ಗುಂಪು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 14:28 IST
Last Updated 7 ಡಿಸೆಂಬರ್ 2025, 14:28 IST
<div class="paragraphs"><p>ಸೈನಿಕರ ದಂಗೆಯ ವದಂತಿಗಳ ನಡುವೆಯೂ ಬೆನಿನ್‌ನ ಕೊಟೊನೌ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು</p></div>

ಸೈನಿಕರ ದಂಗೆಯ ವದಂತಿಗಳ ನಡುವೆಯೂ ಬೆನಿನ್‌ನ ಕೊಟೊನೌ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿತ್ತು

   

ಕೊಟೊನೌ: ಪಶ್ಚಿಮ ಆಫ್ರಿಕಾದ ಬೆನಿನ್‌ ದೇಶದ ಅಧ್ಯಕ್ಷ ಪ್ಯಾಟ್ರಿಸ್‌ ಟ್ಯಾಲನ್‌ ಅವರನ್ನು ಪದಚ್ಯುತಿಗೊಳಿಸಿರುವುದಾಗಿ ಸೈನಿಕರ ಗುಂಪೊಂದು ಸರ್ಕಾರಿ ಸ್ವಾಮ್ಯದ ವಾಹಿನಿಯಲ್ಲಿ ಘೋಷಿಸಿದ್ದ ಬೆನ್ನಲ್ಲೇ, ‘ಈ ದಂಗೆಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ’ ಎಂದು ಸರ್ಕಾರ ಭಾನುವಾರ ಹೇಳಿದೆ.

ಪಶ್ಚಿಮ ಆಫ್ರಿಕಾವು ಇತ್ತೀಚಿನ ವರ್ಷಗಳಲ್ಲಿ ಅನೇಕ ದಂಗೆಗಳನ್ನು ಕಂಡಿದೆ. ಬೆನಿನ್‌ ನೆರೆಹೊರೆಯ ನೈಜರ್‌ ಮತ್ತು ಬುರ್ಕಿನಾ ಫಾಸೊ, ಮಾಲಿ, ಗಿನಿ ಮತ್ತು ಗಿನಿ–ಬಸೌ ರಾಷ್ಟ್ರಗಳಲ್ಲಿ ದಂಗೆಗಳು ನಡೆದಿವೆ. 

ADVERTISEMENT

‘ಕೊಟೊನೌನ ಹತ್ತಿಯ ರಾಜ’ ಎಂದೇ ಕರೆಯಲ್ಪಡುವ 67 ವರ್ಷದ ಟ್ಯಾಲನ್‌ ಅವರು 2016ರಿಂದ ಅಧಿಕಾರದಲ್ಲಿದ್ದು, ಮುಂದಿನ ಏಪ್ರಿಲ್‌ನಲ್ಲಿ ಅಧಿಕಾರ ಹಸ್ತಾಂತರಿಸಬೇಕಿದೆ. ಇವರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ಗಮನಾರ್ಹವಾಗಿದ್ದರೂ, ಜಿಹಾದಿಗಳ ಹಿಂಸಾಚಾರವೂ ಹೆಚ್ಚಾಗಿತ್ತು.

ವಾಹಿನಿಯಲ್ಲಿ ಕಾಣಿಸಿಕೊಂಡಿದ್ದ ಎಂಟು ಸೈನಿಕರ ಬಳಿ ರೈಫಲ್‌ಗಳಿದ್ದವು. ವಿವಿಧ ಬಣ್ಣದ ಟೋಪಿಗಳನ್ನು ಧರಿಸಿದ್ದರು. ಅವರು ತಮ್ಮ ಗುಂಪಿಗೆ ‘ಮಿಲಿಟರಿ ಕಮಿಟಿ ಫಾರ್‌ ರಿಫೌಂಡೇಶನ್’ ಎಂದು ಹೆಸರಿಟ್ಟಿದ್ದು, ಲೆಫ್ಟಿನೆಂಟ್‌ ಕರ್ನಲ್‌ ಪ್ಯಾಸ್ಕಲ್‌ ಟಿಗ್ರಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ದೇಶದ ಅಧ್ಯಕ್ಷರು ಮತ್ತು ಎಲ್ಲ ರಾಜ್ಯ ಸಂಸ್ಥೆಗಳನ್ನು ಪದಚ್ಯುತಿಗೊಳಿಸಿರುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.