
ಪಿಟಿಐ
ಜೆರುಸಲೇಂ: ಹಮಾಸ್ ಬಂಡುಕೋರರು ನಮಗೆ ಹಸ್ತಾಂತರಿಸಿದ ಮೂರು ಮೃತದೇಹಗಳ ಅವಶೇಷಗಳು ಒತ್ತೆಯಾಳುಗಳದ್ದಲ್ಲ ಎಂದು ಇಸ್ರೇಲ್ ಸೇನೆ ಶನಿವಾರ ತಿಳಿಸಿದೆ.
‘ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡಿದ್ದ ಇಸ್ರೇಲ್ ಪ್ರಜೆಗಳ ಪೈಕಿ ಒಟ್ಟು 11 ಮಂದಿಯ ಮೃತದೇಹಗಳನ್ನು ಹಸ್ತಾಂತರಿಸಬೇಕಿದೆ. ಒತ್ತೆಯಾಳುಗಳದ್ದು ಎಂದು ಹೇಳಿ ರೆಡ್ ಕ್ರಾಸ್ ಸಂಸ್ಥೆ ಮೂಲಕ ಮೂರು ಮೃತದೇಹಗಳ ಅವಶೇಷಗಳನ್ನು ಹಮಾಸ್ ಶುಕ್ರವಾರ ರಾತ್ರಿ ಹಸ್ತಾಂತರಿಸಿದೆ. ಅವುಗಳ ವಿಧಿ ವಿಜ್ಞಾನ ಪರೀಕ್ಷೆ ನಡೆಸಲಾಗಿದ್ದು, ಆ ಅವಶೇಷಗಳು 11 ಒತ್ತೆಯಾಳುಗಳ ಪೈಕಿ ಯಾರದ್ದೂ ಅಲ್ಲ ಎಂಬುದು ವರದಿಯಲ್ಲಿ ಗೊತ್ತಾಗಿದೆ’ ಎಂದು ಇಸ್ರೇಲ್ ಹೇಳಿದೆ.
ಕದನ ವಿರಾಮ ಜಾರಿಗೆ ಬಂದಾಗಿನಿಂದ ಹಮಾಸ್ ಬಂಡುಕೋರರು 20 ಮಂದಿ ಒತ್ತೆಯಾಳುಗಳನ್ನು ಹಾಗೂ 17 ಒತ್ತೆಯಾಳುಗಳ ಮೃತದೇಹಗಳನ್ನು ಇಸ್ರೇಲ್‌ಗೆ ಹಸ್ತಾಂತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.