ADVERTISEMENT

ವಿಶ್ವಸಂಸ್ಥೆಯ ಶೇ 33ರಷ್ಟು ಸಿಬ್ಬಂದಿಗೆ ಲೈಂಗಿಕ ಕಿರುಕುಳ

ಮೊದಲ ಸಮೀಕ್ಷಾ ವರದಿಯಲ್ಲಿ ಉಲ್ಲೇಖ

ಏಜೆನ್ಸೀಸ್
Published 17 ಜನವರಿ 2019, 1:19 IST
Last Updated 17 ಜನವರಿ 2019, 1:19 IST
..
..   

ವಿಶ್ವಸಂಸ್ಥೆ:ಕಳೆದ ಎರಡು ವರ್ಷಗಳ ಅವಧಿಯಲ್ಲಿ ವಿಶ್ವಸಂಸ್ಥೆಯ ಪ್ರತಿ ಮೂರು ಸಿಬ್ಬಂದಿಯ ಪೈಕಿ ಒಬ್ಬರ ಮೇಲೆ (ಶೇ 33) ಲೈಂಗಿಕ ಕಿರುಕುಳ ನಡೆದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಲೈಂಗಿಕ ಕಿರುಕುಳದಂತಹ ಘಟನೆಗಳನ್ನು ಪತ್ತೆಹಚ್ಚಲು ಮೊದಲ ಬಾರಿಗೆ ಕೈಗೊಂಡಿದ್ದ ಸಮೀಕ್ಷೆಯ ವರದಿಯು ಮಂಗಳವಾರ ಬಿಡುಗಡೆಯಾಗಿದೆ.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರುಸಂಸ್ಥೆಯ ಉದ್ಯೋಗಿಗಳಿಗೆ ಬರೆದಿರುವಪತ್ರದಲ್ಲಿ ಅಂಕಿ–ಅಂಶ, ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾರೆ. ಉದ್ಯೋಗದ ಸ್ಥಳವನ್ನು ಉತ್ತಮಗೊಳಿಸುವ ಕೆಲವು ಸಲಹೆಗಳನ್ನೂ ಪತ್ರ ಒಳಗೊಂಡಿದೆ.

ADVERTISEMENT

ಮನ ನೋಯಿಸುವ ಲೈಂಗಿಕ ಕತೆಗಳು ಅಥವಾ ಜೋಕ್‌ಗಳುಬಹುತೇಕ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕಂಡುಬಂದಿವೆ.

ಲೈಂಗಿಕ ವಿಷಯ ಕುರಿತ ಮಾತುಕತೆ, ಅಕ್ಷೇಪಾರ್ಹ ಭಂಗಿ ಅಥವಾ ಸ್ಪರ್ಶಿಸಲು ಮುಂದಾದಾಗ ಅದಕ್ಕೆ ಸಹಮತ ನೀಡಿದಉದ್ಯೋಗಿಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಡೆಲೊಯಿಟ್ ಎಂಬ ಸಂಸ್ಥೆ ನವೆಂಬರ್‌ನಲ್ಲಿ ನಡೆದ ಸಮೀಕ್ಷೆ ತಿಳಿಸಿದೆ.

ಸಮೀಕ್ಷೆ ವೇಳೆ ಒಟ್ಟು30,364 ಉದ್ಯೋಗಿಗಳುಪ್ರಶ್ನಾವಳಿಗೆ ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.