ಬೀಜಿಂಗ್(ಚೀನಾ): ತಮ್ಮ ದೇಶದಲ್ಲಿಸುಮಾರು 21 ಸಂಘಟನೆಗಳಿಗೆ ಸೇರಿದ 50 ಸಾವಿರಕ್ಕೂ ಹೆಚ್ಚು ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದುಅಫ್ಘಾನಿಸ್ತಾನ ರಕ್ಷಣಾ ಸಚಿವ ಹಿಲಾವುದ್ದೀನ್ ಹೆಲಾಲ್ ಹೇಳಿದ್ದಾರೆ.
8ನೇ ಬೀಜಿಂಗ್ ಕ್ಸಿಯಾಂಗ್ಶಾನ್ ಫೋರಂನಲ್ಲಿ ಮಾತನಾಡಿದ ‘ಸದ್ಯ ದೇಶದಲ್ಲಿ 21 ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸಂಘಟನೆಗಳ ಒಟ್ಟು ಉಗ್ರರ ಸಂಖ್ಯೆ 50,200. ಈ ಪೈಕಿ ವಿದೇಶಿ ಉಗ್ರರ ಸಂಖ್ಯೆ 8,023’ ಎಂದು ಒತ್ತಿ ಹೇಳಿದರು.
ಉಗ್ರ ಸಂಘಟನೆಗಳು ಈ ಪ್ರದೇಶದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಹೋರಾಡುತ್ತಿದ್ದು, ಅಫ್ಘಾನಿಸ್ತಾನವು ಯುದ್ಧಭೂಮಿಯಾಗಿ ಮಾರ್ಪಾಡಾಗುತ್ತಿದೆ.38 ಸಾವಿರ ಉಗ್ರರನ್ನು ಹೊಂದಿರುವ ತಾಲಿಬಾನ್ ಎಂದು ಅತ್ಯಂತ ದೊಡ್ಡ ಸಂಘಟನೆಯಾಗಿದ್ದು, ಐಎಸ್‌ಗೆ ಸೇರಿದ 2 ಸಾವಿರಕ್ಕೂ ಹೆಚ್ಚು ಉಗ್ರರು ದೇಶದಲ್ಲಿದ್ದಾರೆ ಎಂದರು.
‘ದೇಶದಲ್ಲಿರುವ ಒಟ್ಟು ಉಗ್ರರಲ್ಲಿಶೇ. 70 ರಷ್ಟು ಉಗ್ರರು ಪಾಕಿಸ್ತಾನದವರು. ಉಜ್ಬೇಕಿಸ್ತಾನ ಮೂಲದ ಶೇ. 6, ಚೆಚೆನ್ಯಾ ಮೂಲದಶೇ. 4, ಚೀನಾ ಮೂಲದ ಶೇ. 1 ಹಾಗೂ ಅರಬ್ ದೇಶಗಳ ಶೇ. 3 ರಷ್ಟು ಉಗ್ರರು ಇದ್ದಾರೆ. ಉಳಿದಂತೆ ಶೇ. 14 ರಷ್ಟು ಉಗ್ರರು ಅಘ್ಘಾನಿಸ್ತಾನದವರೇ’ ಎಂದು ಮಾಹಿತಿ ನೀಡಿದರು.
ದೀರ್ಘಕಾಲದಿಂದತಾಲಿಬಾನ್ ಉಗ್ರ ಸಂಘಟನೆಯ ಬಂಡಾಯಎದುರಿಸುತ್ತಿರುವಅಫ್ಘಾನಿಸ್ತಾನ ರಾಜಕೀಯ, ಸಾಮಾಜಿಕ ಅಸ್ಥಿರತೆಯಿಂದ ಬಳಲುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.