
25 ವರ್ಷಗಳ ಹಿಂದೆ ಈ ದಿನ
ಕಡು ಬಡವರಿಗೆ ಜನಶ್ರೀ ವಿಮಾ ಯೋಜನೆ
ನವದೆಹಲಿ, ಜೂನ್ 20 (ಪಿಟಿಐ)– ಬಡವರಿಗೆ ಸಾಮಾಜಿಕ ಭದ್ರತೆ ಒದಗಿ ಸುವುದಕ್ಕಾಗಿ ಕೇಂದ್ರ ಸರ್ಕಾರ, ಬಡತನ ರೇಖೆಯ ಕೆಳಗಿರುವವರಿಗೆ ಹೊಸ ಸಮೂಹ ವಿಮಾ ಯೋಜನೆಯಾದ ‘ಜನಶ್ರೀ ವಿಮಾ ಯೋಜನೆ’ಗೆ ಇಂದು ಮಂಜೂರಾತಿ ನೀಡಿತು.
18ರಿಂದ 60 ವರ್ಷ ವಯಸ್ಸಿನ ಕಡು ಬಡವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಮೋದ್ ಮಹಾಜನ ಅವರು, ಸುದ್ದಿಗಾರರಿಗೆ ತಿಳಿಸಿದರು. ಕನಿಷ್ಠ 25 ಜನರು ಒಂದುಗೂಡಿ ಈ ಗುಂಪು ವಿಮಾ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
ನೈರುತ್ಯ ರೈಲ್ವೆ ವಲಯ ಸ್ಥಳಾಂತರ ಆಜ್ಞೆ ರದ್ದು
ಬೆಂಗಳೂರು, ಜೂನ್ 20– ನೈರುತ್ಯ ರೈಲ್ವೆ ವಲಯ ಕಚೇರಿಯನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿ ಕೇಂದ್ರ ಸರ್ಕಾರವು 1999ರ ಏಪ್ರಿಲ್ 12ರಂದು ಹೊರಡಿಸಿದ್ದ ಆಜ್ಞೆಯನ್ನು ಹೈಕೋರ್ಟ್ ಇಂದು ರದ್ದುಪಡಿಸಿತು. ಮೊದಲಿನ ತೀರ್ಮಾನದಂತೆ ಬೆಂಗಳೂರಿನಲ್ಲಿ ವಲಯ ಕಚೇರಿಯನ್ನು ತೆರೆಯುವ ಬಗ್ಗೆ ಇಂದಿನಿಂದ 6 ವಾರಗಳಲ್ಲಿ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.