ADVERTISEMENT

25 ವರ್ಷಗಳ ಹಿಂದೆ: ಅದಕ್ಷ ನೌಕರರ ವಜಾಕ್ಕೆ ಸುಪ್ರೀಂ ಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 0:00 IST
Last Updated 28 ಜೂನ್ 2025, 0:00 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಅದಕ್ಷ ನೌಕರರ ವಜಾಕ್ಕೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ, ಜೂನ್‌ 27 (ಪಿಟಿಐ)– ಉಪಯುಕ್ತ ಸೇವೆ ಸಲ್ಲಿಸುವ ನೌಕರರನ್ನು ಮಾತ್ರ ಕೆಲಸದಲ್ಲಿಟ್ಟುಕೊಂಡು ಉಳಿದವರನ್ನು ಕಿತ್ತು ಹಾಕುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.

ಅನಗತ್ಯ ಹುದ್ದೆಗಳ ನಿಯಂತ್ರಣಕ್ಕೆ ಯತ್ನಿಸುವುದರ ಜೊತೆಗೆ ಈ ಕ್ರಮ ಅನುಸರಿಸಬೇಕೆಂದು ಅದು ಸೂಚಿಸಿದೆ.

ADVERTISEMENT

ಕೆಳ ನ್ಯಾಯಾಲಯದ ನ್ಯಾಯಾಧೀಶರಿಗೆ 58 ವರ್ಷಕ್ಕಿಂತ ಮೇಲೆ ಕೆಲಸದಲ್ಲಿ  ಮುಂದುವರಿಯುವ ಹಕ್ಕು ಇಲ್ಲ ಎಂದು ಕೋರ್ಟ್‌ ಹೇಳಿದೆ.

ಬ್ರಿಟಿಷ್‌ ಮಹಿಳೆ ಒಪ್ಪಿಸಲು ನ್ಯಾಯಾಲಯ ನಿರಾಕರಣೆ

ಮೈಸೂರು, ಜೂನ್‌ 27(ಪ್ರಜಾವಾಣಿ ವಾರ್ತೆ)– ಬ್ಯಾಂಕ್‌ ದರೋಡೆ ಸಂಬಂಧ ನಗರದಲ್ಲಿ ಬಂದಿಯಾಗಿರುವ ಬ್ರಿಟಿಷ್‌ ಮಹಿಳೆಯನ್ನು ಮುಂಬೈ ಪೊಲೀಸರಿಗೆ ಒಪ್ಪಿಸಲು ನಿರಾಕರಿಸಿರುವ ನಗರದ ಮೂರನೇ ಹೆಚ್ಚುವರಿ ನ್ಯಾಯಾಧೀಶರು, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದ್ದಾರೆ.

ಕಳೆದ ನವೆಂಬರ್ 12ರಂದು ಐವರು ದುಷ್ಕರ್ಮಿಗಳು ಮುಂಬೈನ ಕೊಲಬಾದ ಎಲ್‌ಕೆಪಿ ಫೆರೆಕ್ಸ್‌ ಎಂಬ ವಿದೇಶಿ ವಿನಿಮಯ ಕಚೇರಿ ಮೇಲೆ ದಾಳಿ ನಡೆಸಿ 25 ಲಕ್ಷ ನಗದು ಸೇರಿದಂತೆ ನೂರಾರು ವಿದೇಶಿ (ಅಮೆರಿಕನ್‌ ಡಾಲರ್ಸ್‌) ಟ್ರಾವೆಲರ್ಸ್‌ ಚೆಕ್‌ಗಳನ್ನು ದರೋಡೆ ಮಾಡಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.