
ಪ್ರಜಾವಾಣಿ ವಿಶೇಷ
50 ವರ್ಷಗಳ ಹಿಂದೆ ಈ ದಿನ
ರಾಜ್ಯಗಳಿಗೆ ಹೆಚ್ಚು ಅಧಿಕಾರ ನೀಡಲು ಜೆ.ಪಿ. ಕರೆ
ಮದ್ರಾಸ್, ಮೇ 7– ಕೇಂದ್ರ ಸರ್ಕಾರದಲ್ಲಿ ಈಗ ಸಂಗ್ರಹವಾಗಿರುವ ‘ಅಗಾಧ’ ಅಧಿಕಾರವನ್ನು ಸಂಪೂರ್ಣವಾಗಿ ಮರು ಹಂಚಿಕೆಗೊಳಿಸಬೇಕೆಂದು ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಇಂದು ಇಲ್ಲಿ ಕರೆ ನೀಡಿದರು.
ದೇಶದಲ್ಲಿ ‘ಪೂರ್ಣ ರಾಜಕೀಯ ಕ್ರಾಂತಿ’ಯುಂಟಾಗಬೇಕಾದರೆ, ಒಬ್ಬ ವ್ಯಕ್ತಿ ಇಲ್ಲವೇ ಒಂದು ಸಂಸ್ಥೆಯಲ್ಲಿ ಅಧಿಕಾರ ಸಂಗ್ರಹಣೆಯನ್ನು ತೊಡೆದುಹಾಕಬೇಕೆಂದು ಅವರು ಬುದ್ಧಿಜೀವಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ಹೇಳಿದರು.
ಕೇಂದ್ರ ಸರ್ಕಾರವು ರಕ್ಷಣೆ, ವಿದೇಶ ವ್ಯವಹಾರ, ಶಸ್ತ್ರಾಸ್ತ್ರ ಉತ್ಪಾದನೆ, ಆಂತರಿಕ ಭದ್ರತೆ ಮತ್ತು ನಾಣ್ಯ ವ್ಯವಸ್ಥೆಯ ಅಧಿಕಾರವನ್ನು ತನ್ನಲ್ಲಿಟ್ಟುಕೊಂಡು, ಉಳಿದ ಅಧಿಕಾರಗಳನ್ನು ರಾಜ್ಯಗಳಿಗೆ ಹಂಚಬೇಕೆಂದೂ ಜಯಪ್ರಕಾಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.