
ಪ್ರಜಾವಾಣಿ ವಾರ್ತೆ
ಬೆಂಗಳೂರು, ನ.1– ಎಲ್ಲ ಕನ್ನಡ ಸಾಫ್ಟ್‌ವೇರ್ ಉತ್ಪಾದಕರೂ ತಮ್ಮ ಕಂಪ್ಯೂಟರ್ ಕೀಲಿಮಣೆಯಲ್ಲಿ ಸರ್ಕಾರ ನಿಗದಪಡಿಸಿರುವ ಪ್ರಮಾಣೀಕೃತ ಸಾಫ್ಟ್‌ವೇರ್ ಸಂಕೇತ ಬಳಸಲು ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ವಿಶ್ವದಾದ್ಯಂತ 376 ಕಂಪನಿಗಳು ಭಾಗವಹಿಸಿರುವ, ಏಷ್ಯಾದ ಅತಿ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಮೇಳ ‘ಬೆಂಗಳೂರು ಐಟಿ ಡಾಟ್‌ಕಾಮ್’ನಲ್ಲಿ ಇಂದು ಮುಖ್ಯಮಂತ್ರಿ ಕೃಷ್ಣ ಅವರು ಇದನ್ನು ಪ್ರಕಟಿಸಿದರು.
ಆವರಣದಲ್ಲಿ ಬೆಳಿಗ್ಗೆ ಈ ಪ್ರತಿಷ್ಠಿತ ಮೇಳವನ್ನು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಕೆ.ಸಿ. ಪಂತ್ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.