ADVERTISEMENT

25 ವರ್ಷಗಳ ಹಿಂದೆ: ಪ್ರಿಯಾಂಕಾ ಛೋಪ್ರಾ ಭುವನ ಸುಂದರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪ್ರಿಯಾಂಕಾ ಛೋಪ್ರಾ ಭುವನ ಸುಂದರಿ

ಲಂಡನ್‌, ಡಿ. 1– ಭಾರತದ ಸುಂದರಿ ಪ್ರಿಯಾಂಕಾ ಛೋಪ್ರಾ ಹೊಸ ಸಹಸ್ರಮಾನದ ಮೊದಲ ಭುವನ ಸುಂದರಿ ಕಿರೀಟವನ್ನು ಧರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ.

ಮಿಸ್‌ ವರ್ಲ್ಡ್‌ 2000 ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಇತರ 94 ಸ್ಪರ್ಧಿಗಳನ್ನು ಹಿಂದಕ್ಕಟ್ಟಿದ ಪ್ರಿಯಾಂಕಾ, ಭುವನ ಸುಂದರಿ ಕಿರೀಟದೊಂದಿಗೆ 1 ಲಕ್ಷ ಡಾಲರ್‌ಗಳ ನಗದು ಬಹುಮಾನವನ್ನೂ ಪಡೆದುಕೊಂಡಿದ್ದಾಳೆ. ಇಟಲಿಯ ಜಾರ್ಜಿಯಾ ಪಾಮಸ್‌ ಮತ್ತು ಟರ್ಕಿಯ ಯಕ್ಸೆಲ್ ಅಕ್‌ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ್ದಾರೆ.

ಹರಪನಹಳ್ಳಿ ಬಳಿ ಲಾರಿ ಉರುಳಿ ಏಳು ಸಾವು

ಹರಪನಹಳ್ಳಿ, ಡಿ. 1– ಸುಮಾರು 80 ಜನರನ್ನು ತುಂಬಿಕೊಂಡು ಚಿಕ್ಕಮಗಳೂರು ಕಡೆ ಹೋಗುತ್ತಿದ್ದ ಲಾರಿಯೊಂದು ಉರುಳಿ ಇಬ್ಬರು ಮಕ್ಕಳು ಸೇರಿದಂತೆ ಏಳು ಮಂದಿ ಸ್ಥಳದಲ್ಲಿಯೇ ಸತ್ತು 52 ಮಂದಿ ಗಾಯಗೊಂಡ ಘಟನೆ ಇಂದು ಇಲ್ಲಿಗೆ ಸಮೀಪದ ಹಾರಕನಾಳು ಬಳಿ ಸಂಭವಿಸಿದೆ.

ADVERTISEMENT