ADVERTISEMENT

ರಾಜಕೀಯ ದಾಳಿ

ಕೆ.ಬಿ.ಸಿದ್ದಯ್ಯ
Published 26 ಜುಲೈ 2013, 19:59 IST
Last Updated 26 ಜುಲೈ 2013, 19:59 IST

ಸರ್ಕಾರ ರೂಪಿಸಲು ಹೊರಟಿರುವ ಸಾಂಸ್ಕೃತಿಕ ನೀತಿಯು ಬಹುಸಂಸ್ಕೃತಿಯ ಮೇಲಿನ ರಾಜಕೀಯ ದಾಳಿಯಾಗಬಹುದು. ಬಹುಸಂಸ್ಕೃತಿ ವ್ಯವಸ್ಥೆಯ ಭಾರತದಲ್ಲಿ ಸಾಂಸ್ಕೃತಿಕ ಏಕಸ್ವಾಮ್ಯ ಸಾಧಿಸುವುದಕ್ಕೆ ನನ್ನ ವೈಯಕ್ತಿಕ ವಿರೋಧವಿದೆ. ಸಾಂಸ್ಕೃತಿಕ ನೀತಿ ಜಾರಿಯಾದರೂ ಜನಸಂಸ್ಕೃತಿಯ ಮೇಲೆ ಅದು ಪ್ರಭಾವ ಬೀರುವಂತಿರಬಾರದು. ಏಕೆಂದರೆ ಮುಂದೊಂದು ದಿನ ಏಕಭಾಷಾ ನೀತಿಯೂ ಜಾರಿಗೆ ಬರುವ ಸಾಧ್ಯತೆ ಬರಬಹುದು.

ಬಹುಸಂಸ್ಕೃತಿ ವ್ಯವಸ್ಥೆಯಲ್ಲಿ ಹಲವು ಸಮಸ್ಯೆಗಳಿದ್ದರೂ ಅವನ್ನು ನಾವೇ ತಿದ್ದಿಕೊಳ್ಳಬಹುದಾಗಿದೆ. ಆದರೆ ಹೊಸ ನೀತಿಯಿಂದ ಇದು ಸಾಧ್ಯವಾಗದು. ಬಹುಸಂಸ್ಕೃತಿ ನೆಲೆಗಳ ಮೇಲೆ ದಾಳಿ ಮಾಡುವ ಸಾಂಸ್ಕೃತಿಕ ಏಕಸ್ವಾಮ್ಯ ವ್ಯವಸ್ಥೆ ಹೆಚ್ಚು ಅಪಾಯಕಾರಿ ಹಾಗೂ ಹಾನಿಕಾರಕ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.