
ಪಿಟಿಐ
ಫುಟ್‌ಬಾಲ್
ನವದೆಹಲಿ: ಭಾರತ 23 ವರ್ಷದೊಳಗಿನ ಪುರುಷರ ತಂಡವು, ತಾಜಿಕಿಸ್ತಾನದ ತೂರ್ಸುನ್‌ಝೋದಾದಲ್ಲಿ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಆತಿಥೇಯ ತಂಡದ ವಿರುದ್ಧ 2–3 ಅಂತರದಿಂದ ಪರಾಭವಗೊಂಡಿತು.
ಸುಹೇಲ್ ಅಹಮದ್ ಭಟ್ 34ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಎದುರಾಳಿ ತಂಡದ ಅನ್ಸೋರ್ 59ನೇ ನಿಮಿಷದಲ್ಲಿ ಗೋಲು ಹೊಡೆದು, ಸಮಬಲ ಸಾಧಿಸಿದರು.
ಭಾರತದ ಪಾರ್ಥಿವ್ ಗೊಗೊಯ್ ಅವರು 85ನೇ ನಿಮಿಷದಲ್ಲಿ ಆಕರ್ಷಕ ಗೋಲು ಗಳಿಸಿದರು. ಆದರೆ, ತಾಜಿಕಿಸ್ತಾನದ ಮುಹಮ್ಮದ್ ಇಕ್ಬಾಲ್ ದವಲತೊವ್ (90+1ನೇ ನಿ.) ಹಾಗೂ ಮುಹಮ್ಮದ್ ಆಲಿ ಆಜೀಜ್‌ಬೋಯವ್ (90+4ನೇ ನಿ.) ಗೋಲು ಗಳಿಸಿ, ಗೆಲುವು ಕಸಿದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.