
ಪ್ರಜಾವಾಣಿ ವಾರ್ತೆ
ಫುಟ್‌ಬಾಲ್
ಬೆಂಗಳೂರು: ಕರ್ನಾಟಕ ತಂಡವು ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ‘ರಾಜಮಾತಾ ಜೀಜಾಬಾಯಿ ಟ್ರೋಫಿ’ಗಾಗಿ ನಡೆಯುತ್ತಿರುವ 29ನೇ ಮಹಿಳೆಯರ ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 3–0 ಗೋಲುಗಳಿಂದ ಆತಿಥೇಯ ಪಶ್ಚಿಮ ಬಂಗಾಳಕ್ಕೆ ಮಣಿಯಿತು.
ಪಶ್ಚಿಮ ಬಂಗಾಳ ಪರ ಕವಿತಾ ಸರೇನ್ (22ನೇ ಮತ್ತು 23ನೇ ನಿಮಿಷ) ಎರಡು ಗೋಲು ಗಳಿಸಿದರೆ, ಸುಲಂಜನಾ ರೌಲ್ (45+3ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.