ADVERTISEMENT

ಡೈಮಂಡ್ ಲೀಗ್ ಅಥ್ಲೆಟಿಕ್ಸ್‌: ಅವಿನಾಶ್‌ಗೆ 13ನೇ ಸ್ಥಾನ

ಪಿಟಿಐ
Published 27 ಏಪ್ರಿಲ್ 2025, 0:00 IST
Last Updated 27 ಏಪ್ರಿಲ್ 2025, 0:00 IST
ಅವಿನಾಶ್ ಸಬಳೆ
ಅವಿನಾಶ್ ಸಬಳೆ   

ಶಿಯಾಮೆನ್, ಚೀನಾ: ಭಾರತದ ಅಥ್ಲೀಟ್ ಅವಿನಾಶ್ ಸಬಳೆ ಅವರು ಇಲ್ಲಿ ನಡೆದ ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನ 3000 ಮೀಟರ್ಸ್ ಸ್ಟೀಪಲ್‌ ಚೇಸ್‌ನಲ್ಲಿ 13ನೇ ಸ್ಥಾನ ಪಡೆದರು. 

ಶನಿವಾರ ನಡೆದ ಸ್ಪರ್ಧೆಯಲ್ಲಿ 30 ವರ್ಷ ವಯಸ್ಸಿನ ಅವಿನಾಶ್ ಅವರು 8 ನಿಮಿಷ, 22.59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಅವರು 16 ಓಟಗಾರರೊಂದಿಗೆ ಪೈಪೋಟಿಯಲ್ಲಿದ್ದರು. 

ಹೋದ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಡೈಮಂಡ್ ಲೀಗ್ ಫೈನಲ್‌ನಲ್ಲಿ ಅವರು 8 ನಿಮಿಷ, 17.09 ಸೆಕೆಂಡುಗಳ ಕಾಲವನ್ನು ದಾಖಲಿಸಿದ್ದರು. ಅವರ 8 ನಿಮಿಷ, 9.91 ಸೆಕೆಂಡುಗಳ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. 

ADVERTISEMENT

ಅವಿನಾಶ್ ಅವರು ಹೋದ ವರ್ಷ ನಡೆದಿದ್ದ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ 11ನೇ ಸ್ಥಾನ ಪಡೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.