ADVERTISEMENT

ಸೈಕ್ಲಿಂಗ್‌: ರಾಣಿ ಚನ್ನಮ್ಮ ವಿ.ವಿ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 18:18 IST
Last Updated 11 ಫೆಬ್ರುವರಿ 2020, 18:18 IST
ಸಮಗ್ರ ಪ್ರಶಸ್ತಿ ಗಳಿಸಿದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದಾನಮ್ಮ ಚಿಚಕಂಡಿ, ದಾನಮ್ಮ ಪಾಯಣ್ಣವರ, ಅಪೇಕ್ಷಾ ಜಗತಾಪ, ಸಾವಿತ್ರಿ ಹೆಬ್ಬಾಳಟ್ಟಿ, ದಾನಮ್ಮ ಗುರವ ಹಾಗೂ ಆರತಿ ಭಾಟಿ ವಿಜಯದ ಸಂಕೇತ ತೋರಿದರು
ಸಮಗ್ರ ಪ್ರಶಸ್ತಿ ಗಳಿಸಿದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದಾನಮ್ಮ ಚಿಚಕಂಡಿ, ದಾನಮ್ಮ ಪಾಯಣ್ಣವರ, ಅಪೇಕ್ಷಾ ಜಗತಾಪ, ಸಾವಿತ್ರಿ ಹೆಬ್ಬಾಳಟ್ಟಿ, ದಾನಮ್ಮ ಗುರವ ಹಾಗೂ ಆರತಿ ಭಾಟಿ ವಿಜಯದ ಸಂಕೇತ ತೋರಿದರು   

ವಿಜಯಪುರ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸೈಕ್ಲಿಸ್ಟ್‌ಗಳು ಮೊದಲ ಬಾರಿಗೆ ಇಲ್ಲಿ ನಡೆದ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ರೋಡ್‌ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

ನಾಲ್ಕು ದಿನಗಳ ಕಾಲ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪಟಿಯಾಲದ ಪಂಜಾಬ್‌ ವಿಶ್ವವಿದ್ಯಾಲಯದ ಸೈಕ್ಲಿಸ್ಟ್‌ಗಳು ರನ್ನರ್ಸ್ ಅಪ್ ಆಗಿ ಹೊರಹೊಮ್ಮಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 21 ಅಂಕ, ಪಂಜಾಬ್ ವಿ.ವಿ. 10 ಅಂಕ ಹಾಗೂ ಅಮೃತಸರದ ಗುರುನಾನಕ್‌ ದೇವ್‌ ವಿ.ವಿ. ಸೈಕ್ಲಿಸ್ಟ್‌ಗಳು ಆರು ಅಂಕಗಳನ್ನು ಪಡೆದರು.

ಮಂಗಳವಾರ ನಡೆದ ಕ್ರೈಟೀರಿ ಯನ್ ರೇಸ್ ವಿಭಾಗದಲ್ಲಿ ಗುರುನಾನಕ್‌ ದೇವ ವಿ.ವಿ.ಯ ಇರೋಮ ಮಾತುಲೊಬಿ ದೇವಿ (16 ಅಂಕ), ರಾಣಿ ಚನ್ನಮ್ಮ ವಿ.ವಿ. ದಾನಮ್ಮ ಚಿಚಕಂಡಿ (16 ಅಂಕ) ಹಾಗೂ ಗುರುನಾನಕ ದೇವ ವಿ.ವಿ. ಯ ಸುಶಿಕಲಾ ಅಗಸೆ ದುರ್ಗಾಪ್ರಸಾದ್‌ (13 ಅಂಕ) ಅವರು ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕ ಪಡೆದರು.

ADVERTISEMENT

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ದಕ್ಷಿಣ ಭಾರತದ 27 ವಿಶ್ವವಿದ್ಯಾಲಯಗಳ 127 ಸೈಕ್ಲಿಸ್ಟ್‌ಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.