ADVERTISEMENT

ಪ್ರೊ ಕಬಡ್ಡಿ | ಆಟಗಾರರ ಹರಾಜು: ಮೊಹಮ್ಮದ್ ರೇಝಾ, ದೇವಾಂಕ್‌ಗೆ ಜಾಕ್‌ಪಾಟ್

ಪಿಟಿಐ
Published 1 ಜೂನ್ 2025, 0:33 IST
Last Updated 1 ಜೂನ್ 2025, 0:33 IST
   

ಮುಂಬೈ: ಆಲ್‌ರೌಂಡರ್ ಮೊಹಮ್ಮದ್ ರೇಝಾ ಶಾದಿಲೊಯಿ ಚಿಯಾನೆ ಅವರು ಶನಿವಾರ ಇಲ್ಲಿ ನಡೆದ ಪ್ರೊ ಕಬಡ್ಡಿ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಆಟಗಾರನಾದರು. ಅವರನ್ನು ಗುಜರಾತ್ ಜೈಂಟ್ಸ್ ತಂಡವು ₹ 2.23 ಕೋಟಿ ಮೌಲ್ಯಕ್ಕೆ ಖರೀದಿಸಿತು.  ರೇಡರ್ ದೇವಾಂಕ್ ದಲಾಲ್ ಅವರನ್ನು ಬೆಂಗಾಲ್ ವಾರಿಯರ್ಸ್ ತಂಡವು  ₹ 2.205 ಕೋಟಿ ನೀಡಿ ಖರೀದಿಸಿತು.  

ದೇವಾಂಕ್ ಅವರು ಎ ಕೆಟಗರಿಯಲ್ಲಿ ಅತಿ ಹೆಚ್ಚು ಮೌಲ್ಯ ಪಡೆದ ಭಾರತದ ಆಟಗಾರಾದರು. ಮೊಹಮ್ಮದ್ ರೇಝಾ ಅವರು ಇರಾನ್‌ ದೇಶದವರು. ಎ ಕೆಟಗರಿಯಲ್ಲಿ ಆಶು ಮಲಿಕ್ (₹ 1.80 ಕೋಟಿ) ಅವರು ದಬಂಗ್ ಡೆಲ್ಲಿ ಮತ್ತು ಬಿ ಕೆಟಗರಿಯಲ್ಲಿ ಅಂಕಿತ್ ಜಗಲನ್ (₹ 1.573 ಕೋಟಿ) ಅವರನ್ನು ಪಟ್ನಾ ಪೈರೆಟ್ಸ್‌ ಖರೀದಿಸಿತು ಎಂದು ಪ್ರೊ ಕಬಡ್ಡಿ ಟೂರ್ನಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. 

ತಮಿಳ್ ತಲೈವಾಸ್ ತಂಡವು ರೇಡರ್ ಅರ್ಜುನ್ ದೇಶವಾಲ್‌ ಅವರನ್ನು ₹ 1.405 ಕೋಟಿಗೆ ಪಡೆಯಿತು. ರೇಡರ್ ಗುಮಾನ್ ಸಿಂಗ್ (₹ 1.073 ಕೋಟಿ) ಅವರನ್ನು ಯುಪಿ ಯೋಧಾಸ್ ಖರೀದಿಸಿತು. ಅನುಭವಿ ರೇಡರ್ ಮಣಿಂದರ್ ಸಿಂಗ್ (₹ 20 ಲಕ್ಷ) ಅವರು ಪಟ್ನಾ ಪೈರೆಟ್ಸ್ ತಂಡದ ಪಾಲಾದರು. ಆಲ್‌ರೌಂಡರ್ ಅಂಕಿತ್ ಜಗನ್ ಅವರೂ ಇದೇ ತಂಡಕ್ಕೆ ₹ 1.573 ಕೋಟಿಗೆ ಸೇರಿದರು. 

ADVERTISEMENT

ಬೆಂಗಳೂರು ಬುಲ್ಸ್ ತಂಡವು ಯೋಗೇಶ್ ಬಿಜೇಂದರ್ ದಹಿಯಾ ಮತ್ತು  ಡಿಫೆಂಡರ್ ಕೃಷನ್ ಧುಲ್ ಅವರನ್ನು ₹ 60 ಲಕ್ಷಕ್ಕೆ  ಖರೀದಿಸಿತು. 

‘ಸ್ಟಾರ್ ಆಟಗಾರ’ ಆಲ್‌ರೌಂಡರ್ ಪವನ್ ಸೆಹ್ರಾವತ್ ಅವರನ್ನು ತಮಿಳ್ ತಲೈವಾಸ್ ತಂಡವು ₹ 59.50 ಲಕ್ಷಕ್ಕೆ ಪಡೆಯಿತು. ಅನುಭವಿ ಡಿಫೆಂಡರ್ ಫಜಲ್ ಅತ್ರಾಚಲಿ ಅವರನ್ನು ದಬಂಗ್ ಡೆಲ್ಲಿ ತಂಡವು ಸೇರಿಸಿಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.