
ಪ್ರಜಾವಾಣಿ ವಾರ್ತೆ
ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ (ಸಾಯ್) ವಿವಿಧ ಯೋಜನೆಗಳ ಮೂಲಕ ಹಣಕಾಸು ನೆರವು ಪಡೆಯುವ ಭಾರತದ ಟೆನಿಸ್ ಆಟಗಾರರು ದೇಶಕ್ಕೆ ಆಡು ವುದಕ್ಕೆ ಆದ್ಯತೆ ನೀಡಬೇಕು. ದೇಶಕ್ಕೆ ಆಡಲು ಸಕಾರಣವಿಲ್ಲದೇ ನಿರಾಕರಿಸಿದರೆ ನೆರವನ್ನು ಮರಳಿ ವಸೂಲಿ ಮಾಡಲಾಗುವುದು ಎಂದು ಸಾಯ್‌ನ ಆದೇಶದಲ್ಲಿ ತಿಳಿಸಲಾಗಿದೆ.
ಹಣಕಾಸಿನ ನೆರವಿಗೆ ಪ್ರತಿಯಾಗಿ ಉತ್ತರದಾಯಿತ್ವ ಹೊಂದಿರಲು ಸಾಯ್ ಈ ಕ್ರಮಕ್ಕೆ ಮುಂದಾಗಿದೆ. ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್ (ಟಿಎಜಿಜಿ– ಟ್ಯಾಗ್) ಅಡಿ ಆಯ್ಕೆಯಾದ ಆಟಗಾರರು ಇಂಥ ವಾಗ್ದಾನ ಪತ್ರಕ್ಕೆ ಸಹಿಹಾಕಬೇಕೆಂದು ತಿಳಿಸಲಾಗಿದೆ. ಅವರು ಪಡೆಯುವ ಹಣಕಾಸಿನ ನೆರವು ದೇಶದ ಕ್ರೀಡಾ ಉನ್ನತಿಗೆ ಕಾಣಿಕೆ ನೀಡಬೇಕಾದ ಹೊಣೆಗಾರಿಕೆಯನ್ನೂ ಹೊಂದಿದೆ ಎಂಬ ಒಕ್ಕಣೆಯ ಪತ್ರಕ್ಕೆ ಸಹಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.