ADVERTISEMENT

ಗೇಮಿಂಗ್ ಪ್ರಿಯರಿಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಏಸಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಆಗಸ್ಟ್ 2021, 8:26 IST
Last Updated 17 ಆಗಸ್ಟ್ 2021, 8:26 IST
ಏಸಸ್ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ..
ಏಸಸ್ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ..   

ಬೆಂಗಳೂರು: ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಯಸುವವರಿಗೆ ಏಸಸ್ ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ.

ಏಸಸ್ ರಾಗ್ ಸ್ಮಾರ್ಟ್‌ಫೋನ್ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಕಂಪನಿ ಪರಿಚಯಿಸಿದೆ.

ಏಸಸ್ ರಾಗ್ ಫೋನ್ 5 ಮತ್ತು ರಾಗ್ ಫೋನ್ 5s ಪ್ರೊ ಅನ್ನು ಏಸಸ್ ಬಿಡುಗಡೆ ಮಾಡುತ್ತಿದೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸಂಪರ್ಕ ಮತ್ತು ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಇದೆ.

ADVERTISEMENT

6.78 ಇಂಚಿನ ಡಿಸ್‌ಪ್ಲೇ, 18GB LPDDR5 ವರೆಗಿನ RAM ಏಸಸ್ ಫೋನ್‌ಗಳ ವಿಶೇಷತೆಯಾಗಿದೆ. 128 GB, 256 GB, ಮತ್ತು 512 GBವರೆಗಿನ ಸ್ಟೋರೇಜ್, ಆಂಡ್ರಾಯ್ಡ್ 11 ಆಧಾರಿತ ರಾಗ್ ಯುಐ ಇರಲಿದೆ.

ಏಸಸ್ ನೂತನ ಸ್ಮಾರ್ಟ್‌ಫೋನ್‌ಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ದೇಶದ ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ಬೆಲೆ ವಿವರ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.