ADVERTISEMENT

ಕೇಂದ್ರ ಸರ್ಕಾರದಿಂದಲೇ ಫಿಟ್ನೆಸ್ ಆ್ಯಪ್ Fit India ಬಿಡುಗಡೆ: ಏನೇನು ವಿಶೇಷತೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 13:44 IST
Last Updated 29 ಆಗಸ್ಟ್ 2021, 13:44 IST
ಫಿಟ್ ಇಂಡಿಯಾ ಆ್ಯಪ್ ಲೊಗೊ
ಫಿಟ್ ಇಂಡಿಯಾ ಆ್ಯಪ್ ಲೊಗೊ   

ಬೆಂಗಳೂರು:ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ನವದೆಹಲಿಯಲ್ಲಿ ಇಂದು ‘ಫಿಟ್ ಇಂಡಿಯಾ‘ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದರು.

ದೇಶದ ಜನರ ಫಿಟ್ನೆಸ್ ಹೆಚ್ಚಿಸುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೊದಿ ಅವರು ಆಗಸ್ಟ್ 29, 2019 ರಂದು ಫಿಟ್‌ ಇಂಡಿಯಾ ಮೂವ್‌ಮೆಂಟ್‌ಗೆ ಚಾಲನೆ ನೀಡಿದ್ದರು. ಈಗ ಅದರ ಮೊಬೈಲ್ ಆ್ಯಪ್ ಬಿಡುಗಡೆಯಾಗಿದೆ. ಫಿಟ್ನೆಸ್‌ಗೆ ಸಂಬಂಧಿಸಿದಂತೆ ಆ್ಯಪ್‌ನಲ್ಲಿ ಅಗತ್ಯ ಮಾರ್ಗದಶರ್ನನ, ಫಿಡಿಂಗ್‌ಗಳು ಇರಲಿವೆ.

ಈ ಆ್ಯಪ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಉನ್ನತ ತಂತ್ರಜ್ಞಾನಗಳನ್ನು ಒಳಗೊಂಡಿದೆ.

ADVERTISEMENT

ಮುಖ್ಯವಾಗಿ ಬಳಕೆದಾರರ ಫಿಟ್ನೆಸ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಇದು ದಾಖಲಿಸಿಕೊಂಡು ಫಲಿತಾಂಶಗಳನ್ನು ನೀಡುತ್ತದೆ. ನಡೆದಾಗ ಸ್ಪೆಪ್‌ಗಳನ್ನು ಕೌಂಟ್ ಮಾಡುವುದು, ಕ್ಯಾಲರಿ ಬರ್ನ್, ದಿನಕ್ಕೆ ಎಷ್ಟು ನೀರು ಕುಡಿದಿದ್ದೇವೆ ಎಂಬುದನ್ನು, ಎಷ್ಟೊತ್ತು ನಿದ್ದೆ ಮಾಡಿದ್ದೇವೆ ಎಂಬುದನ್ನು ದಾಖಲಿಸಿಕೊಳ್ಳುತ್ತದೆ.

ಅಲ್ಲದೇ ದೇಹದ ತೂಕ, ಎತ್ತರಕ್ಕೆ ಸಂಬಂಧಿಸಿದ ಬಿಎಂಐ (Body Mass Index) ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಫಿಟ್ನೆಸ್‌ ಬಗ್ಗೆ ಪರೀಕ್ಷೆಗಳನ್ನು ಈ ಆ್ಯಪ್ ಮಾಡುತ್ತದೆ. ಗೂಗಲ್ ಫ್ಲೆ ಸ್ಟೋರ್ ಹಾಗೂ ಐಓಎಸ್ಮೂಲಕ ಇದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇನ್ನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಈ ಆ್ಯಪ್‌ನ್ನು ಹೊರ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.