ADVERTISEMENT

ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಇನ್ಫಿನಿಕ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2021, 11:20 IST
Last Updated 19 ಸೆಪ್ಟೆಂಬರ್ 2021, 11:20 IST
ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
ನೂತನ ಸ್ಮಾರ್ಟ್‌ಫೋನ್ ಬಿಡುಗಡೆ   

ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆ ಎರಡು ನೂತನ ಗ್ಯಾಜೆಟ್ ಪರಿಚಯಿಸುವ ಮೂಲಕ ಇನ್ಫಿನಿಕ್ಸ್ ಸದ್ದು ಮಾಡಿದೆ.

ಬಜೆಟ್ ದರಕ್ಕೆ ಉತ್ತಮ ಫೀಚರ್ ನೀಡುವ ಮೂಲಕ ಇನ್ಫಿನಿಕ್ಸ್ ಜನಪ್ರಿಯತೆ ಗಳಿಸಿದೆ.

ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್ ಎಂಬ ಎರಡು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದೆ.

ADVERTISEMENT

ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್ ಎರಡೂ ಸ್ಮಾರ್ಟ್‌ಫೋನ್‌ಗಳು 4 GB ಮತ್ತು 64 GB ಎಂಬ ಏಕೈಕ ಸ್ಟೋರೇಜ್ ಆವೃತ್ತಿ ಮೂಲಕ ಲಭ್ಯವಿದ್ದು, ಕ್ರಮವಾಗಿ ₹8,999 ಮತ್ತು ₹10,999 ದರ ಹೊಂದಿವೆ.

ಇನ್ಫಿನಿಕ್ಸ್ ಹಾಟ್ 11, 6.6 ಇಂಚಿನ ಫುಲ್‌ ಎಚ್‌ಡಿ+ ಡಿಸ್‌ಪ್ಲೇ, 13+13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ, 5200mAh ಬ್ಯಾಟರಿ ಹೊಂದಿದೆ.

ಇನ್ಫಿನಿಕ್ಸ್ ಹಾಟ್ 11ಎಸ್, 6.78 ಇಂಚಿನ ಡಿಸ್‌ಪ್ಲೇ, 50+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. ಜತೆಗೆ 5000mAh ಬ್ಯಾಟರಿ ಬೆಂಬಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.