ADVERTISEMENT

ಐಟೆಲ್‌ ಎ48 ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ₹ 6,399

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 13:22 IST
Last Updated 17 ಆಗಸ್ಟ್ 2021, 13:22 IST

ಬೆಂಗಳೂರು: ಕೈಗೆಟಕುವ ಬೆಲೆಗೆ ಸ್ಮಾರ್ಟ್‌ಫೋನ್‌ ತಯಾರಿಸುವ ಐಟೆಲ್‌ ಕಂಪನಿಯು ‘ಐಟೆಲ್‌ ಎ48’ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ‘ಎ’ ಸರಣಿಯ ಸ್ಮಾರ್ಟ್‌ಫೋನ್‌ ವಿಭಾಗವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.

₹ 6,399ರ ಬೆಲೆಯ ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 10ಗೊ ಎಡಿಷನ್‌ ಒಎಸ್‌ ಹೊಂದಿದೆ. 6.1 ಇಂಚು ವಾಟರ್‌ಡ್ರಾಪ್‌ ಎಚ್‌ಡಿ+ ಪರದೆ, 1.4ಗಿಗಾ ಹರ್ಟ್ಸ್‌ ಕ್ವಾಡ್‌ ಕೋರ್‌ ಪ್ರೊಸೆಸರ್, 3,000 ಎಂಎಎಚ್‌ ಬ್ಯಾಟರಿ, 2ಜಿಬಿ ರ್‍ಯಾಮ್‌, 32 ಜಿಬಿ ರೋಮ್‌, 128 ಜಿಬಿವರೆಗೆ ವಿಸ್ತರಣೆ,5 ಎಂಪಿ/ವಿಜಿಎ+5ಎಂಪಿ ಹಿಂಬದಿ ಕ್ಯಾಮೆರಾ, 5 ಎಂಪಿ ಮುಂಬದಿ ಕ್ಯಾಮೆರಾ, ಫಿಂಗರ್‌ಪ್ರಿಂಟ್‌ ಮತ್ತು ಫೇಸ್‌ ಅನ್‌ಲಾಕ್‌, ಎಐ ಡ್ಯುಯಲ್‌ ಕ್ಯಾಮೆರಾ ಒಳಗೊಂಡಿದೆ. ಫೋನ್‌ ಖರೀದಿಸಿದ 100 ದಿನದೊಳಗೆ ಇದರ ಪರದೆ ಹಾಳಾದಲ್ಲಿ ಒಂದು ಬಾರಿಗೆ ಉಚಿತವಾಗಿ ಹೊಸ ಪರದೆ ಹಾಕಿಸಬಹುದಾಗಿದೆ.

‘ಆನ್‌ಲೈನ್‌ ಶಿಕ್ಷಣ, ಹಣ ವರ್ಗಾವಣೆ, ಮನರಂಜನೆ ಅಷ್ಟೇ ಅಲ್ಲದೆ, ಮನೆಯಿಂದ ಕೆಲಸ ಮಾಡುವುದಕ್ಕೂ ಸ್ಮಾರ್ಟ್‌ಫೋನ್‌ ಬಳಕೆ ಆಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದೇವೆ’ ಎಂದು ಟ್ರಾನ್ಶನ್‌ ಇಂಡಿಯಾದ ಸಿಇಒ ಅರ್ಜಿತ್‌ ತಲಪಾತ್ರ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.