ನವದೆಹಲಿ: ಗೂಗಲ್ ಜೊತೆಗೂಡಿ ತಯಾರಿಸಿರುವ ಅತಿ ಕಡಿಮೆ ಬೆಲೆಯ ‘ಜಿಯೊಫೋನ್ ನೆಕ್ಸ್ಟ್’ ಸ್ಮಾರ್ಟ್ಫೋನ್ ಅನ್ನು ದೀಪಾವಳಿಗೆ ಬಿಡುಗಡೆ ಮಾಡುವುದಾಗಿ ಜಿಯೊ ಕಂಪನಿಯು ತಿಳಿಸಿದೆ.
ಕಂಪನಿ ಈ ಹಿಂದೆ ಘೋಷಿಸಿದ್ದ ಪ್ರಕಾರ, ಸ್ಮಾರ್ಟ್ಫೋನ್ಅನ್ನು ಶುಕ್ರವಾರ ಬಿಡುಗಡೆ ಮಾಡಬೇಕಿತ್ತು. ಆದರೆ, ಬಿಡುಗಡೆ ದಿನಾಂಕ ಮುಂದೂಡಿರುವುದಾಗಿ ಕಂಪನಿಯು ತಿಳಿಸಿದೆ.
2ಜಿ ಯಿಂದ 4ಜಿ ಸಂಪರ್ಕಕ್ಕೆ ಅಪ್ಗ್ರೇಡ್ ಆಗಲು ಬಯಸುವವರಿಗೆ ಈ ಸ್ಮಾರ್ಟ್ಫೋನ್ ಸೂಕ್ತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಆದರೆ, ಇದರ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿಯನ್ನು ಕಂಪನಿ ನೀಡಿಲ್ಲ.
ಈ ಹೆಚ್ಚುವರಿ ಕಾಲಾವಕಾಶ ದೊರೆತಿರುವುದರಿಂದ ಸೆಮಿಕಂಡಕ್ಟರ್ ಕೊರತೆಯಿಂದ ಆಗುವ ಸಮಸ್ಯೆಯನ್ನು ನಿವಾರಿಸಲು ಅನುಕೂಲ ಆಗಲಿದೆ ಎಂದು ಜಿಯೊ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.