ADVERTISEMENT

ಮೈಕ್ರೋಸಾಫ್ಟ್‌ ವಿಂಡೋಸ್‍ 11 ಬಿಡುಗಡೆ: 6 ವರ್ಷಗಳ ಬಳಿಕ ಉನ್ನತೀಕರಣಗೊಂಡ ಓಎಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 17:30 IST
Last Updated 24 ಜೂನ್ 2021, 17:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಸಾಫ್ಟ್‌ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಉನ್ನತೀಕರಿಸಿದ ಕಾರ್ಯಚರಣ ತಂತ್ರಾಂಶ ವಿಂಡೋಸ್‌ 11 ಅನ್ನು ಗುರುವಾರ ಬಿಡುಗಡೆಗೊಳಿಸಿದೆ.

ಸುಮಾರು ಆರು ವರ್ಷಗಳ ಬಳಿಕ ಉನ್ನತೀಕರಿಸಿದ ಆಪರೇಟಿಂಗ್‌ ಸಿಸ್ಟಮ್‌ ಇದಾಗಿದ್ದು, ಬ್ಯುಸಿನೆಸ್‌, ಪ್ರೊಫೆಷನಲ್‌ ಬಳಕೆದಾರರಿಗೆ ಹಾಗೂ ಮಲ್ಟಿಪಲ್‌ ಮಾನಿಟರ್‌ ಬಳಕೆ ಮಾಡುವವರಿಗೆ ಸಹಾಯವಾಗುವ ದೃಷ್ಟಿಯಲ್ಲಿ ವಿಂಡೋಸ್‌ 11 ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ವರ್ಚುವಲ್‌ ಈವೆಂಟ್‌ನಲ್ಲಿ ಮೈಕ್ರೋಸಾಫ್ಟ್‌ ವಿಂಡೋಸ್‌ 11 ಅನ್ನು ಲೋಕಾರ್ಪಣೆ ಮಾಡಿದೆ. ವರ್ಷಾಂತ್ಯಕ್ಕೆ ಬಳಕೆದಾರರಿಗೆ ವಿಂಡೋಸ್‌ 11 ಲಭ್ಯವಿದೆ. ಈಗಾಗಲೇ ವಿಂಡೋಸ್‌ 10 ಬಳಕೆ ಮಾಡುತ್ತಿರುವವರಿಗೆ ಉಚಿತವಾಗಿ ಉನ್ನತೀಕರಿಸಿದ ಓಎಸ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಿದೆ.

ADVERTISEMENT

ವಿಂಡೋಸ್‌ 11ನಲ್ಲಿ ಹೊಸ ಆ್ಯಪ್‌ ಸ್ಟೋರ್‌, ಆ್ಯಂಡ್ರಾಯ್ಡ್‌ ಆ್ಯಪ್‌ಗಳು, ಅತ್ಯುತ್ತಮ ಗ್ರಾಫಿಕ್ಸ್‌ ಇರುವ ಸಾವಿರಕ್ಕೂ ಹೆಚ್ಚು ಗೇಮ್‌ಗಳು, ಅಟೊ ಎಚ್‌ಡಿಆರ್‌ ಇರಲಿವೆ ಎಂದು ಮೈಕ್ರೋಸಾಫ್ಟ್‌ ತಿಳಿಸಿದೆ.

ವಿಂಡೋಸ್‌ 11 ಓಎಸ್‌ ಅತ್ಯಂತ ಸುರಕ್ಷಿತ ಓಎಸ್‌ ಆಗಿದೆ. ಲ್ಯಾಪ್‌ಟಾಪ್‌ನ ಬ್ಯಾಟರಿಯ ಕಾರ್ಯಸಾಮರ್ಥ್ಯವನ್ನು ಹೆಚ್ಚಿಸಲಿದೆ. ಮ್ಯಾಕ್‌ ಸೇರಿದಂತೆ ಇತರ ಸಿಸ್ಟಮ್‌ ಬಳಕೆ ಮಾಡುತ್ತಿರುವ ಯಾರಿಗೆ ಬೇಕಿದ್ದರೂ ಕರೆ ಮಾಡಬಹುದು, ವಿಡಿಯೊ ಕರೆ ಮಾಡಬಹುದು ಎಂದು ಓಸ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮೈಕ್ರೋಸಾಫ್ಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.