ADVERTISEMENT

Nokia C01 Plus: ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2021, 12:49 IST
Last Updated 13 ಸೆಪ್ಟೆಂಬರ್ 2021, 12:49 IST
ನೋಕಿಯಾ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ
ನೋಕಿಯಾ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ    

ಬೆಂಗಳೂರು: ಜನಪ್ರಿಯ ಮೊಬೈಲ್ ಬ್ರ್ಯಾಂಡ್ ನೋಕಿಯಾ, ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದೆ.

ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ಸಿ ಸರಣಿಯಲ್ಲಿ ಹೊಸದಾಗಿ C01 ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.

ಬೆಲೆ ಎಷ್ಟಿದೆ?

ADVERTISEMENT

ಹೊಸ ನೋಕಿಯಾ C01 ಪ್ಲಸ್ ಸ್ಮಾರ್ಟ್‌ಫೋನ್, ಆರಂಭಿಕ ಮಾದರಿಯ ಆವೃತ್ತಿಯಾಗಿದ್ದು, ದೇಶದಲ್ಲಿ ₹5,999 ದರ ಹೊಂದಿದೆ. ನೀಲಿ ಮತ್ತು ನೇರಳೆ ಬಣ್ಣದಲ್ಲಿ ಹೊಸ ಫೋನ್ ಲಭ್ಯವಾಗಲಿದೆ. ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್ ಮೂಲಕ ನೋಕಿಯಾ ಸ್ಮಾರ್ಟ್‌ಫೋನ್ ದೊರೆಯಲಿದೆ.

ತಾಂತ್ರಿಕ ವೈಶಿಷ್ಟ್ಯ

5.45 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಒಕ್ಟಾ ಕೋರ್ ಉನಿಸಾಕ್ SC9863A ಪ್ರೊಸೆಸರ್ ಇದರಲ್ಲಿದೆ.

2GB RAM ಮತ್ತು 16GB ಮೆಮೊರಿ ಸ್ಟೋರೇಜ್ ಇದ್ದು, ಆಂಡ್ರಾಯ್ಡ್ 11 ಗೊ ಎಡಿಶನ್, 5 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ ಮತ್ತು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಸ ನೋಕಿಯಾ ಫೋನ್‌ನಲ್ಲಿದೆ. ಅಲ್ಲದೆ, 3000mAh ಬ್ಯಾಟರಿ ಬೆಂಬಲ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.