ADVERTISEMENT

ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 15:34 IST
Last Updated 28 ಜುಲೈ 2021, 15:34 IST
ನೋಕಿಯಾ ಮೂರು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿದೆ.
ನೋಕಿಯಾ ಮೂರು ಆಕರ್ಷಕ ಫೋನ್‌ಗಳನ್ನು ಪರಿಚಯಿಸಿದೆ.   

ಬೆಂಗಳೂರು: ಮೊಬೈಲ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ನೋಕಿಯಾ, ಮೂರು ಹೊಸ ಮಾದರಿಗಳನ್ನು ಪರಿಚಯಿಸಿದೆ.

ನೋಕಿಯಾ ಮೊಬೈಲ್ಸ್ ಸರಣಿಯಲ್ಲಿ ನೋಕಿಯಾ XR20, ನೋಕಿಯಾ 6310 ಮತ್ತು ನೋಕಿಯಾ C30 ಬಿಡುಗಡೆಯಾಗಿದೆ. ಜತೆಗೆ ಹೊಸ ಇಯರ್‌ಬಡ್ಸ್ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.

ಫಿನ್‌ಲ್ಯಾಂಡ್ಮೂಲಕ ನೋಕಿಯಾ, ಪ್ರಸ್ತುತ ಎಚ್‌ಎಂಡಿ ಗ್ಲೋಬಲ್ ಒಡೆತನದಲ್ಲಿದೆ.

ADVERTISEMENT
ನೋಕಿಯಾ 6310 (2021)

ನೋಕಿಯಾ XR20 ಮತ್ತು ನೋಕಿಯಾ C30 ಸ್ಮಾರ್ಟ್‌ಫೋನ್‌ಗಳಾಗಿದ್ದರೆ, ನೋಕಿಯಾ 6310 ಬೇಸಿಕ್ ಫೀಚರ್ ಫೋನ್ ಆಗಿದ್ದು, 2021ರ ಆವೃತ್ತಿಯಾಗಿದೆ.

ಮೂರು ಹೊಸ ಮಾದರಿಗಳು ದೇಶದ ಮಾರುಕಟ್ಟೆಯನ್ನು ಶೀಘ್ರದಲ್ಲೇ ಪ್ರವೇಶಿಸಲಿದ್ದು, ಬೆಲೆ ವಿವರವನ್ನು ಕಂಪನಿ ಇನ್ನಷ್ಟೇ ಪ್ರಕಟಿಸಲಿದೆ.

ನೋಕಿಯಾ XR20 ಸ್ಮಾರ್ಟ್‌ಫೋನ್ 4GB + 64GB ಹಾಗೂ 6GB + 128 GB ಎಂಬ ಎರಡು ಮಾದರಿಗಳಲ್ಲಿ ದೊರೆಯಲಿದೆ.

ನೋಕಿಯಾ C30 ಫೋನ್ 2GB + 32GB, 3GB + 32GB ಮತ್ತು 3GB + 64GB ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಾಗಲಿದೆ.

ನೋಕಿಯಾ 6310 ಮೊಬೈಲ್ 2021 ಆವೃತ್ತಿ ಕಪ್ಪು, ಹಸಿರು, ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ದೊರೆಯಲಿದ್ದು, ಅಂದಾಜು ₹3,500 ದರ ಹೊಂದಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.