ADVERTISEMENT

ಹೊಸ X, G, C ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ನೋಕಿಯಾ

ಡೆಕ್ಕನ್ ಹೆರಾಲ್ಡ್
Published 9 ಏಪ್ರಿಲ್ 2021, 6:54 IST
Last Updated 9 ಏಪ್ರಿಲ್ 2021, 6:54 IST
ಎಕ್ಸ್, ಜಿ ಮತ್ತು ಸಿ ಸ್ಮಾರ್ಟ್‌‌ಫೋನ್
ಎಕ್ಸ್, ಜಿ ಮತ್ತು ಸಿ ಸ್ಮಾರ್ಟ್‌‌ಫೋನ್   

ಫಿನ್‌ಲ್ಯಾಂಡ್ ಮೂಲದ ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ತಯಾರಿಕ ಸಂಸ್ಥೆ ಎಚ್‌ಎಂಡಿ ಗ್ಲೋಬಲ್, ಹೊಸ ನೋಕಿಯಾ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನೋಕಿಯಾ ನೂತನ ಸರಣಿಯಲ್ಲಿ ಎಕ್ಸ್, ಜಿ ಮತ್ತು ಸಿ ಸ್ಮಾರ್ಟ್‌‌ಫೋನ್‌ಗಳು ಬಿಡುಗಡೆಯಾಗಿವೆ.

ಹೊಸ ಎಕ್ಸ್ ಸರಣಿಯಲ್ಲಿ X20 ಮತ್ತು X10 ಎಂಬ ಎರಡು ಆಕರ್ಷಕ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಜಿ ಸರಣಿಯಲ್ಲಿ G20 ಮತ್ತು G10 ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದರೆ, ಸಿ ಸರಣಿಯಲ್ಲಿ C20 ಮತ್ತು C10 ಎಂಬ ಎರಡು ಮಾದರಿಗಳು ಹೊಸದಾಗಿ ಪರಿಚಯಿಸಲ್ಪಟ್ಟಿವೆ.

ADVERTISEMENT

ಹೊಸ ಸರಣಿಯಲ್ಲಿ 6 ನೂತನ ಸ್ಮಾರ್ಟ್‌ಫೋನ್ ಜತೆಗೇ, ನೋಕಿಯಾ ಲೈಟ್ ಇಯರ್‌ಬಡ್ಸ್ ಕೂಡ ಬಿಡುಗಡೆಯಾಗಿದೆ. ಲೈಟ್ ಇಯರ್‌ಬಡ್ಸ್ ಏಪ್ರಿಲ್ 8ರಿಂದಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಈ ಪೈಕಿ ಎಕ್ಸ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಜೂನ್‌ನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲಿದೆ. ಜಿ ಸರಣಿ ಮೇ ತಿಂಗಳಿನಲ್ಲಿ ಮತ್ತು ಸಿ ಸರಣಿ ಕೂಡ ಜಾಗತಿಕವಾಗಿ ಮೇ ತಿಂಗಳಿನಲ್ಲಿಯೇ ಬಳಕೆದಾರರಿಗೆ ಖರೀದಿಗೆ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.