ADVERTISEMENT

ಒನ್‌ಪ್ಲಸ್‌ 9 ಸರಣಿಯ ಸ್ಮಾರ್ಟ್‌ಫೋನ್‌ಗಳು, ಒನ್‌ಪ‍್ಲಸ್‌ ವಾಚ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 18:26 IST
Last Updated 23 ಮಾರ್ಚ್ 2021, 18:26 IST
ಒನ್‌ಪ್ಲಸ್‌ 9ಪ್ರೊ
ಒನ್‌ಪ್ಲಸ್‌ 9ಪ್ರೊ   

ಬೆಂಗಳೂರು: ಪ್ರೀಮಿಯಂ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಸದ್ಯ ಮುಂಚೂಣಿಯಲ್ಲಿ ಇರುವ ಒನ್‌ಪ್ಲಸ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಮಂಗಳವಾರ ಒನ್‌ಪ್ಲಸ್‌ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಹಾಗೂ ವಿಶೇಷವಾಗಿ ಒನ್‌ಪ್ಲಸ್‌ ವಾಚ್‌ ಬಿಡುಗಡೆ ಮಾಡಿದೆ.

ಕ್ಯಾಮೆರಾ ಗುಣಮಟ್ಟದ ದೃಷ್ಟಿಯಿಂದ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ ಎನ್ನುವುದು ಕಂಪನಿಯ ಹೇಳಿಕೆ. ಏಕೆಂದರೆ ಇದರಲ್ಲಿ ವೃತ್ತಿಪರ ಕ್ಯಾಮೆರಾ ತಯಾರಿಸುವ ಹ್ಯಾಸೆಲ್‌ಬ್ಲಾಡ್ ಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅದು ತಿಳಿಸಿದೆ. 5ಜಿ ಬೆಂಬಲಿತ ಈ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ ಒಎಸ್‌ನಿಂದ ಕಾರ್ಯಾಚರಿಸುತ್ತವೆ.

ಒನ್‌ಪ್ಲಸ್‌ 9ಪ್ರೊ: 6.7 ಇಂಚಿನ 120 ಹರ್ಟ್ಸ್‌ ಕ್ಯುಎಚ್‌ಡಿ ಪ್ಲಸ್‌ ಡಿಸ್‌ಪ್ಲೇಯು ಮುಂದಿನ ಪೀಳಿಗೆಯ ಸ್ಕ್ರೀನ್‌ ತಂತ್ರಜ್ಞಾನ ಹೊಂದಿದ್ದು, ಬ್ಯಾಟರಿ ಬಾಳಿಕೆ ಮತ್ತು ಗೇಮಿಂಗ್‌ ಅನುಭವವನ್ನು ಇನ್ನಷ್ಟು ಸುಧಾರಿಸಲಿದೆ. ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ ಒಎಸ್‌, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 888 ಸಿಪಿಯು, 4,500ಎಂಎಎಚ್‌ಬ್ಯಾಟರಿ, ವಾರ್ಪ್‌ ಚಾರ್ಜ್‌ 65ಟಿ ಮತ್ತು ವಾರ್ಪ್‌ ಚಾರ್ಜ್‌ 50 ವೈಯರ್‌ಲೆಸ್‌ ಚಾರ್ಜಿಂಗ್‌ ಸೌಲಭ್ಯವಿದೆ. 48 ಎಂಪಿ ಮೇನ್‌ ಕ್ಯಾಮೆರಾ, 50ಎಂಪಿ ಅಲ್ಟ್ರಾವೈಡ್‌, 8ಎಂಪಿ ಟೆಲೆಫೊಟೊ ಹಾಗೂ 16ಎಂಪಿ ಫ್ರಂಟ್‌ ಕ್ಯಾಮೆರಾ ಒಳಗೊಂಡಿದೆ.

ADVERTISEMENT

ಒನ್‌ಪ್ಲಸ್‌ 9: 6.55 ಇಂಚ್ ಫ್ಲ್ಯೂಯೆಡ್ ಡಿಸ್‌ಪ್ಲೆ, 50ಎಂಪಿ ಅಲ್ಟ್ರಾವೈಡ್‌ ಕ್ಯಾಮೆರಾ, 48ಎಂಪಿ ಮೇನ್ ಕ್ಯಾಮೆರಾ, 16ಎಂಪಿ ಫ್ರಂಟ್‌ ಕ್ಯಾಮೆರಾ ಇದ್ದು, 4,500 ಎಂಎಎಚ್‌ ಬ್ಯಾಟರಿ ಹೊಂದಿದೆ. ಒನ್‌ಪ್ಲಸ್‌ 9ಆರ್‌: ಭಾರತದ ಮಾರುಕಟ್ಟೆಗಾಗಿ ವಿಶೇಷ ಆವೃತ್ತಿ ಇದಾಗಿದೆ. 6.55 ಇಂಚ್ ಫ್ಲ್ಯೂಯೆಡ್ ಡಿಸ್‌ಪ್ಲೆ, 48ಎಂಪಿ ಮೇನ್‌ ಕ್ಯಾಮೆರಾ, 16 ಎಂಪಿ ಫ್ರಂಟ್‌ ಕ್ಯಾಮೆರಾ, 4,500 ಎಂಎಎಚ್‌ ಬ್ಯಾಟರಿ ಒಳಗೊಂಡಿದೆ.

ಒನ್‌ಪ್ಲಸ್‌ ವಾಚ್‌: ಒನ್‌ಪ್ಲಸ್‌ ಉತ್ಪನ್ನಗಳ ಸಾಲಿಗೆ ಒನ್‌ಪ್ಲಸ್‌ ವಾಚ್ ಹೊಸದಾಗಿ ಸೇರಿಕೊಂಡಿದೆ. ವಿನ್ಯಾಸದಲ್ಲಿ ಸಾಂಪ್ರದಾಯಿಕ ವಾಚ್‌ನಂತೆಯೇ ಕಾಣುತ್ತದೆಯಾದರೂ ಸ್ಮಾರ್ಟ್‌ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡಿದೆ. 46ಎಂಎಂ ಕೇಸ್‌ ಸ್ಟೈನ್‌ಲೆಸ್‌ ಸ್ಟೀಲ್‌, 2.5ಡಿ ಕಾರ್ವ್ಡ್ ಗ್ಲಾಸ್‌ ಹೊಂದಿದೆ. 1.39 ಇಂಚ್ ಅಮೊಎಲ್‌ಇಡಿ ಡಿಸ್‌ಪ್ಲೆ ಹೊಂದಿದೆ. ಕರೆ ಮಾಡಲು ಮತ್ತು ಸ್ವೀಕರಿಸಲು, ಮ್ಯೂಸಿಕ್ ಪ್ಲೇ ಮಾಡಲು, ಫೊಟೊ ತೆಗೆಯಲು, ನೋಟಿಫಿಕೇಷನ್‌ಗಳಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿದೆ. 4ಜಿಬಿ ಸ್ಟ್ಯಾಂಡ್‌ಅಲೋನ್‌ ಸ್ಟೋರೇಜ್‌ ಹೊಂದಿದೆ. ಒನ್‌ಪ್ಲಸ್‌ ಟಿವಿಯೊಂದಿಗೂ ಸಂಪರ್ಕ ಸಾಧಿಸಿ ರಿಮೋಟ್‌ ತರಹ ಬಳಸಬಹುದು. 110ಕ್ಕೂ ಅಧಿಕ ವರ್ಕೌಟ್‌ ಟೈಪ್‌ಗಳಿವೆ. 402 ಎಂಎಎಚ್‌ ಬ್ಯಾಟರಿ, 20 ನಿಮಿಷ ಚಾರ್ಜ್ ಮಾಡಿದರೆ ವಾರವಿಡೀ ಬಳಸಬಹುದು ಎಂದು ಕಂಪನಿ ತಿಳಿಸಿದೆ.

ಲಭ್ಯತೆ: ಒನ್‌ಪ್ಲಸ್‌ 9ಪ್ರೊ ಏಪ್ರಿಲ್‌ 1ರಿಂದ ಮತ್ತು ಒನ್‌ಪ್ಲಸ್‌ 9 ಏಪ್ರಿಲ್‌ 15ರಿಂದ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

ಬೆಲೆ

* ಒನ್‌ಪ್ಲಸ್‌ 9 ಪ್ರೊ: ₹ 64,999 ರಿಂದ ಆರಂಭ

* ಒನ್‌ಪ್ಲಸ್‌ 9: ₹ 49,999 ರಿಂದ ಆರಂಭ

* ಒನ್‌ಪ್ಲಸ್‌ ವಾಚ್‌; ₹ 14,999 (ವಿಶೇಷ ದರ)

* ವಯರ್‌ಲೆಸ್‌ ಚಾರ್ಜರ್‌: ₹ 5,990

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.