ADVERTISEMENT

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2021, 6:07 IST
Last Updated 31 ಆಗಸ್ಟ್ 2021, 6:07 IST
ರಿಯಲ್‌ಮಿ ಫೋನ್‌ಗಳ ದರದಲ್ಲಿ ಏರಿಕೆ
ರಿಯಲ್‌ಮಿ ಫೋನ್‌ಗಳ ದರದಲ್ಲಿ ಏರಿಕೆ    

ಬೆಂಗಳೂರು: ದೇಶದ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ.

ವಿವಿಧ ಮಾದರಿಗಳ ಬೆಲೆಯಲ್ಲಿ ₹1,500 ವರೆಗೆ ಏರಿಕೆ ಮಾಡಲಾಗಿದ್ದು, ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ಡಾಟ್ ಕಾಂ ಹಾಗೂ ಸ್ಟೋರ್ ಬೆಲೆಯಲ್ಲೂ ಪರಿಷ್ಕೃತ ದರ ಕಾಣಿಸಿಕೊಂಡಿದೆ.

ಯಾವೆಲ್ಲ ಮಾದರಿಗಳ ದರ ಏರಿಕೆ?

ADVERTISEMENT

ರಿಯಲ್‌ಮಿ ವಿವಿಧ ಮಾದರಿಗಳ ಬೆಲೆಯಲ್ಲಿ ₹300 ರಿಂದ ₹1,500 ವರೆಗೆ ಹೆಚ್ಚಳವಾಗಿದೆ.

ರಿಯಲ್‌ಮಿ 8, ರಿಯಲ್‌ಮಿ 8 5G, ರಿಯಲ್‌ಮಿ C11 (2021), ರಿಯಲ್‌ಮಿ C21, ರಿಯಲ್‌ಮಿ C25s ಸ್ಮಾರ್ಟ್‌ಫೋನ್ ದರ ಪರಿಷ್ಕರಿಸಲಾಗಿದೆ. ಬಿಡಿಭಾಗಗಳ ಬೆಲೆ ಏರಿಕೆಯಿಂದಾಗಿ ರಿಯಲ್‌ಮಿ ಫೋನ್‌ಗಳ ದರ ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರವೆಷ್ಟು?

ಮಾದರಿ ಹೆಚ್ಚಳ ₹ ಹೊಸ ದರ ₹
ರಿಯಲ್‌ಮಿ 8 4GB+128GB 1500 15999
ರಿಯಲ್‌ಮಿ 8 6GB+128GB 1500 15499
ರಿಯಲ್‌ಮಿ 8 8GB+128GB 1500 16499

ರಿಯಲ್‌ಮಿ 8 5G 4GB+64GB

1500 13999

ರಿಯಲ್‌ಮಿ 8 5G 4GB+128GB

1500 14999

ರಿಯಲ್‌ಮಿ 8 5G 8GB+128GB

1500 16999

ರಿಯಲ್‌ಮಿ C11 (2021) 2GB+32GB

300 6999
ರಿಯಲ್‌ಮಿ C11 (2021) 4GB+64GB 300 8499

ರಿಯಲ್‌ಮಿ C21 3GB+32GB

500 8499

ರಿಯಲ್‌ಮಿ C21 4GB+64GB

500 9499

ರಿಯಲ್‌ಮಿ C25s 4GB+64GB

500 10499

ರಿಯಲ್‌ಮಿ C25s 4GB+128GB

500 11499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.