ADVERTISEMENT

ರಿಲಯನ್ಸ್ ಪರಿಚಯಿಸಲಿದೆ ಜಿಯೊಬುಕ್ ಲ್ಯಾಪ್‌ಟಾಪ್: ಶೀಘ್ರದಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಸೆಪ್ಟೆಂಬರ್ 2021, 11:17 IST
Last Updated 13 ಸೆಪ್ಟೆಂಬರ್ 2021, 11:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಿಲಯನ್ಸ್ ಸಮೂಹದ ಜಿಯೊ, ದೇಶದ ಮಾರುಕಟ್ಟೆಗೆ ಹೊಸ ಲ್ಯಾಪ್‌ಟಾಪ್ ಪರಿಚಯಿಸಲು ಮುಂದಾಗಿದೆ.

‘ಜಿಯೊಬುಕ್’ ಹೆಸರಿನ ಲ್ಯಾಪ್‌ಟಾಪ್, ದೇಶದಲ್ಲಿ ವಿವಿಧ ಉತ್ಪನ್ನಗಳಿಗೆ ಪ್ರಮಾಣೀಕರಣ ನೀಡುವ ‘ಬ್ಯೂರೋ ಆಫ್ ಸ್ಟಾಂಡರ್ಡ್ಸ್‌’ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.

ಹೊಸ ರಿಲಯನ್ಸ್ ಜಿಯೊಬುಕ್ ಲ್ಯಾಪ್‌ಟಾಪ್ ಮೂರು ವಿವಿಧ ಆವೃತ್ತಿಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ADVERTISEMENT

ತಾಂತ್ರಿಕ ವೈಶಿಷ್ಟ್ಯ (ನಿರೀಕ್ಷಿತ)

ಜಿಯೊಬುಕ್, ಸ್ನ್ಯಾಪ್‌ಡ್ರ್ಯಾಗನ್ 665 ಪ್ರೊಸೆಸರ್, 4 GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಸಾಧ್ಯತೆಯಿದೆ.

ಬಜೆಟ್ ದರಕ್ಕೆ ಲಭ್ಯವಾಗುವಂತೆ, ಜಿಯೊಬುಕ್ ದೇಶದ ಮಾರುಕಟ್ಟೆಯಲ್ಲಿ ದೊರೆಯುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.