ADVERTISEMENT

Mi Mix Fold: ಮಡಚಬಲ್ಲ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಶಿಯೋಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2021, 10:37 IST
Last Updated 31 ಮಾರ್ಚ್ 2021, 10:37 IST
ಶಿಯೋಮಿ ಎಂಐ ಮಿಕ್ಸ್ ಫೋಲ್ಡ್
ಶಿಯೋಮಿ ಎಂಐ ಮಿಕ್ಸ್ ಫೋಲ್ಡ್   

ಬೆಂಗಳೂರು: ಹೊಸ ಶಿಯೋಮಿ ಎಂಐ 11 ಅಲ್ಟ್ರಾ, ಪ್ರೊ ಮತ್ತು ಲೈಟ್ ಸರಣಿ ಸ್ಮಾರ್ಟ್‌ಫೋನ್ ಬಿಡುಗಡೆಯ ಬೆನ್ನಲ್ಲೇ, ಶಿಯೋಮಿ ಎಂಐ ಮಿಕ್ಸ್ ಫೋಲ್ಡ್ ಕಂಪನಿ ಪರಿಚಯಿಸುತ್ತಿದೆ.

ಮಡಚಬಲ್ಲ ಡಿಸ್‌ಪ್ಲೇ ಹೊಂದಿರುವ ಮೊದಲ ಶಿಯೋಮಿ ಫೋನ್ ಇದಾಗಿದ್ದು, ಮೇಲ್ಭಾಗದಲ್ಲಿ ಕೂಡ ಡಿಸ್‌ಪ್ಲೇ ಹೊಂದಿದೆ, ಅದರ ಮೂಲಕ ಕರೆ ಮಾಡುವುದು, ಸಂದೇಶ ವೀಕ್ಷಣೆ ಸಹಿತ ಹಲವು ಕೆಲಸ ನಿರ್ವಹಿಸಬಹುದಾಗಿದೆ.

ಮೇಲ್ಭಾಗದಲ್ಲಿ ಎಂಐ ಮಿಕ್ಸ್ ಫೋಲ್ಡ್ ಸ್ಮಾರ್ಟ್‌ಫೋನ್, 6.5 ಇಂಚಿನ ಅಮೊಲಿಡ್ ಟ್ರೂಕಲರ್ ಡಿಸ್‌ಪ್ಲೇ ಹೊಂದಿದೆ. ಮುಖ್ಯ ಡಿಸ್‌ಪ್ಲೇ 8.01 ಇಂಚು ಅಳತೆಯದ್ದಾಗಿದೆ. ಇತರ ಬ್ರ್ಯಾಂಡ್‌ಗಳ ಮಡಚಬಲ್ಲ ಫೋನ್‌ಗಳಿಗೆ ಹೋಲಿಸಿದರೆ, ಎಂಐ ಫೋನ್ ತೂಕದಲ್ಲಿ ಶೇ 27ರಷ್ಟು ಇಳಿಕೆಯಾಗಿದ ಎಂದು ಶಿಯೋಮಿ ಹೇಳಿದೆ.

ADVERTISEMENT

ಲಿಕ್ವಿಡ್ ಲೆನ್ಸ್ ಕ್ಯಾಮರಾ

ಹೊಸ ಶಿಯೋಮಿ ಎಂಐ ಮಿಕ್ಸ್ ಫೋಲ್ಡ್ ಸ್ಮಾರ್ಟ್‌ಫೋನ್‌ನಲ್ಲಿ, ಲಿಕ್ವಿಡ್ ಲೆನ್ಸ್ ಕ್ಯಾಮರಾ ಸೆನ್ಸರ್ ಅಳವಡಿಸಲಾಗಿದೆ. ವಿವಿಧ ಸಂದರ್ಭ ಮತ್ತು ಕಡಿಮೆ ಬೆಳಕಿನಲ್ಲಿಯೂ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಮೂಡಿಸುವಲ್ಲಿ ಇದು ಯಶ‌ಸ್ವಿಯಾಗಿ ಕೆಲಸ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

ಶಿಯೋಮಿ ಎಂಐ ಮಿಕ್ಸ್ ಸ್ಮಾರ್ಟ್‌ಫೋನ್, ಹಿಂಭಾಗದಲ್ಲಿ ಮೂರು ಕ್ಯಾಮರಾ ಲೆನ್ಸ್ ವಿನ್ಯಾಸ ಹೊಂದಿದೆ. 108 ಮೆಗಾಪಿಕ್ಸೆಲ್‌ನ ಪ್ರಧಾನ ಕ್ಯಾಮರಾ, 8 ಮೆಗಾಪಿಕ್ಸೆಲ್ ಲಿಕ್ವಿಡ್ ಲೆನ್ಸ್ ಮತ್ತು 13 ಮೆಗಾಪಿಕ್ಸೆಲ್‌ನ ಮತ್ತೊಂದು ಲೆನ್ಸ್ ಹೊಂದಿದೆ. ಜತೆಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆಯಾಗಿದೆ.

ಪ್ರೊಸೆಸರ್ ಯಾವುದು?

ಕ್ವಾಲ್ಕಂನ ಸ್ನ್ಯಾಪ್‌ಡ್ರ್ಯಾಗನ್ 888 ಒಕ್ಟಾ ಕೋರ್ ಪ್ರೊಸೆಸರ್, ಆಂಡ್ರಾಯ್ಡ್ 10 ಆಧಾರಿತ MIUI 12 ಓಎಸ್, 12 GB/16 GB LPDDR5 RAM ಮತ್ತು 256 GB/512 GB ಸ್ಟೋರೇಜ್ ಆಯ್ಕೆ ಹೊಂದಿದೆ. 5,020mAh ಬ್ಯಾಟರಿ ಹಾಗೂ 67W ಟರ್ಬೋಚಾರ್ಜಿಂಗ್ ಕೂಡ ಇದರಲ್ಲಿದೆ.

ಬೆಲೆ ಎಷ್ಟಿದೆ?

ಶಿಯೋಮಿ ಎಂಐ ಮಿಕ್ಸ್ ಮಡಚಬಲ್ಲ ಸ್ಮಾರ್ಟ್‌ಫೋನ್ ಮೂರು ಆವೃತ್ತಿಗಳಲ್ಲಿ ದೊರೆಯಲಿದೆ. ದೇಶದಲ್ಲಿ ಅಂದಾಜು ದರ ಹೀಗಿದೆ, 12GB RAM + 256GB ಮಾದರಿಗೆ ಅಂದಾಜು ₹1,12,002, 12GB RAM +512GB ಆವೃತ್ತಿಗೆ ₹1,23,204 ಮತ್ತು 16GB RAM + 512GB ಮಾದರಿಗೆ ಅಂದಾಜು ₹1,45,606 ದರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.