ADVERTISEMENT

ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಶಿಯೋಮಿ ರೆಡ್ಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಸೆಪ್ಟೆಂಬರ್ 2021, 7:07 IST
Last Updated 22 ಸೆಪ್ಟೆಂಬರ್ 2021, 7:07 IST
ಶಿಯೋಮಿ ನೂತನ ಲ್ಯಾಪ್‌ಟಾಪ್ ಬಿಡುಗಡೆ
ಶಿಯೋಮಿ ನೂತನ ಲ್ಯಾಪ್‌ಟಾಪ್ ಬಿಡುಗಡೆ    

ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ಶಿಯೋಮಿ, ಆಕರ್ಷಕ ಮಾದರಿಯ ರೆಡ್ಮಿ ಲ್ಯಾಪ್‌ಟಾಪ್ ಪರಿಚಯಿಸಿದೆ.

ರೆಡ್ಮಿ ಜಿ 2021 ಗೇಮಿಂಗ್ ಲ್ಯಾಪ್‌ಟಾಪ್ ಚೀನಾದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಶೀಘ್ರದಲ್ಲೇ ದೇಶದಲ್ಲೂ ಲಭ್ಯವಾಗಲಿದೆ.

ತಾಂತ್ರಿಕ ವೈಶಿಷ್ಟ್ಯ

ADVERTISEMENT

ರೆಡ್ಮಿ ಜಿ 2021 ಗೇಮಿಂಗ್ ಲ್ಯಾಪ್‌ಟಾಪ್, ಇಂಟೆಲ್ ಮತ್ತು ಎಎಂಡಿ ಸರಣಿಯ ಪ್ರೊಸೆಸರ್ ಸಹಿತ ಮಾರುಕಟ್ಟೆ ಪ್ರವೇಶಿಸಿದೆ.

144hz ಡಿಸ್‌ಪ್ಲೇ, 16 GB RAM ಮತ್ತು 512 GB ಸ್ಟೋರೇಜ್ ಇದರಲ್ಲಿದೆ. ವಿಂಡೋಸ್ 11 ಅಪ್‌ಗ್ರೇಡ್, ಇಂಟೆಲ್ ಮಾದರಿಯಲ್ಲಿ 11th Gen ಇಂಟೆಲ್ ಕೋರ್ i5 ಪ್ರೊಸೆಸರ್ ಇದ್ದರೆ, ಎಎಂಡಿ ಆವೃತ್ತಿಯಲ್ಲಿ ಎಎಂಡಿ ರೈಜನ್ 7 ಪ್ರೊಸೆಸರ್ ಇದೆ.

ಬೆಲೆ ವಿವರ

ಚೀನಾದ ಮಾರುಕಟ್ಟೆಗೆ ನೂತನ ರೆಡ್ಮಿ ಲ್ಯಾಪ್‌ಟಾಪ್ ಬಿಡುಗಡೆಯಾಗಿದ್ದು, ಇಂಟೆಲ್ ಆವೃತ್ತಿಗೆ ಚೀನಾದಲ್ಲಿ CNY 5,699 ದರ (₹64,900) ಮತ್ತು ಎಎಂಡಿ ಆವೃತ್ತಿಗೆ CNY 6,999 (₹79,700) ದರವಿದೆ. ಭಾರತದ ಮಾರುಕಟ್ಟೆಗೆ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.