ADVERTISEMENT

ಎಚ್‌ಪಿ ಎನ್ವಿ 15 ನೋಟ್‌ಬುಕ್‌

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 19:30 IST
Last Updated 2 ಸೆಪ್ಟೆಂಬರ್ 2020, 19:30 IST
ಎಚ್‌ಪಿ ಎನ್ವಿ
ಎಚ್‌ಪಿ ಎನ್ವಿ   

ಲ್ಯಾಪ್‌ಟಾಪ್‌ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಚ್‌ಪಿ ಕಂಪನಿಯು ಭಾರತದ ಮಾರುಕಟ್ಟೆಗೆ ಎಚ್‌ಪಿ ಎನ್ವಿ ಸರಣಿಯ ನೋಟ್‌ಬುಕ್‌ಗಳನ್ನು ಬಿಡುಗಡೆ ಮಾಡಿದೆ.

ಎಚ್‌ಪಿ ಎನ್ವಿ 15 ನೋಟ್‌ಬುಕ್‌ನಲ್ಲಿ ಕ್ಯಾಮೆರಾ ಶಟರ್‌, ಮ್ಯೂಟ್‌ ಮೈಕ್‌, ಫಿಂಗರ್‌ಪ್ರಿಂಟ್‌ ರೀಡರ್‌ ಮತ್ತು ಎಚ್‌ಪಿ ಕಮಾಂಡ್ ಸೆಂಟರ್‌ ಹೀಗೆ ಇನ್ನೂ ಹಲವು ಆಯ್ಕೆಗಳು ಸುಲಭವಾಗಿ ಲಭ್ಯವಾಗುವಂತೆ ಆಲ್‌ ಇನ್‌ ಒನ್‌ ಕಿಬೋರ್ಟ್‌ ಇದೆ. 4ಕೆ ಒಎಲ್‌ಇಡಿ ಎಚ್‌ಡಿಆರ್‌ ಡಿಸ್‌ಪ್ಲೇ ಒಳಗೊಂಡಿದೆ.

ಡಾಕ್ಯುಮೆಂಟ್ಸ್‌, ನೋಟ್ಸ್‌, ವೆಬ್‌ಸೈಟ್ಸ್‌ ಇತ್ಯಾದಿಗಳನ್ನು ಕಂಪ್ಯೂಟರ್‌, ಐಫೋನ್‌, ಆಂಡ್ರಾಯ್ಡ್‌ ಫೋನ್ ಅಥವಾ ಟ್ಯಾಬ್ಲೆಟ್‌ಗೆ ವರ್ಗಾಯಿಸಲು ಎಚ್‌ಪಿ ಕ್ವಿಕ್‌ಡ್ರಾಪ್‌ ನೆರವಾಗಲಿದೆ.

ADVERTISEMENT

ಎಚ್‌ಪಿ ಎನ್ವಿ 15 ನೋಟ್‌ಬುಕ್‌ ಮೂರು ಮಾದರಿಗಳಲ್ಲಿ ಲಭ್ಯವಿದ್ದು, ಬೆಲೆ ₹ 1,19,999 ರಿಂದ 1,69,999ರವರೆಗಿದೆ.

ಎಚ್‌ಪಿ ಜೆಡ್‌ಬುಕ್‌ 15 ಇಂಚಿನ ಅತ್ಯಂತ ಸಣ್ಣ ಲ್ಯಾಪ್‌ಟಾಪ್‌ ಆಗಿದೆ. ಬ್ಯಾಟರಿ ಬಾಳಿಕೆ 17.5 ಗಂಟೆಯವರೆಗೆ ಇರಲಿದೆ ಎಂದು ಕಂಪನಿ ಹೇಳಿದೆ. ಬೆಲೆ ₹ 1.21 ಲಕ್ಷದಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.