ADVERTISEMENT

ಕಾಸಿಗೆ ತಕ್ಕಷ್ಟು ಕಜ್ಜಾಯ‘ಐಟೆಲ್‌ ವಿಷನ್‌ 1 ಪ್ರೊ’

ವಿಶ್ವನಾಥ ಎಸ್.
Published 10 ಫೆಬ್ರುವರಿ 2021, 1:58 IST
Last Updated 10 ಫೆಬ್ರುವರಿ 2021, 1:58 IST
ಐಟೆಲ್‌ ವಿಷನ್‌ 1 ಪ್ರೊ
ಐಟೆಲ್‌ ವಿಷನ್‌ 1 ಪ್ರೊ   

‘ಮನೆಯಲ್ಲಿ ವಯಸ್ಸಾದವರಿಗೆ ಒಂದು ಫೋನ್‌ ಕೊಳ್ಳಬೇಕು, ದುಬಾರಿಯದ್ದು ಬೇಡ, ಅವರು ಕಾಲ್‌ ಮಾಡುವುದು, ರಿಸೀವ್ ಮಾಡುವುದೇ ಹೆಚ್ಚು’ ಎನ್ನುವವರಿಗೆ ಕೈಗೆಟಕುವ ಬೆಲೆಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಆಯ್ಕೆಗಳು ಸಾಕಷ್ಟಿವೆ. ಈ ಪಟ್ಟಿಯಲ್ಲಿ ಹಾಂಗ್‌ಕಾಂಗ್ ಮೂಲದ ಟ್ರಾನ್ಶನ್ ಹೋಲ್ಡಿಂಗ್ ಕಂಪನಿಯ ಐಟೆಲ್‌ ಬ್ರ್ಯಾಂಡ್‌ ಸಹ ಒಂದಾಗಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಐಟೆಲ್‌ ಕಂಪನಿಯು ಈಚೆಗೆ ವಿಷನ್‌ 1 ಪ್ರೊ ಬಿಡುಗಡೆ ಮಾಡಿದೆ. ಇದರ ಬೆಲೆ ₹ 6,599. ಕ್ವಾಡ್‌ಕೋರ್‌ ಸಿಪಿಯು 4ಜಿ ಎಲ್‌ಟಿಇ ನೆಟ್‌ವರ್ಕ್‌ಗೆ ಬೆಂಬಲಿಸುತ್ತದೆ. 6.5 ಇಂಚು ಪರದೆ, 4000 ಎಂಎಎಚ್‌ ಬ್ಯಾಟರಿ ಇದರ ಪ್ರಮುಖ ಅಂಶಗಳಾಗಿವೆ.

ಸಿಮ್‌, ಎಸ್‌ಡಿ ಕಾರ್ಡ್‌ ಹಾಕಲು ಫೋನ್‌ನ ಹಿಂಭಾಗವನ್ನು ಪೂರ್ತಿಯಾಗಿ ತೆಗೆಯಲೇಬೇಕು. ಒಂದು ಬಾರಿ ಸಿಮ್‌ ಹಾಕಿದರೆ ಮತ್ತೆ ಫೋನ್‌ ಆಗಲಿ, ಸಿಮ್‌ ಆಗಲಿ ಬದಲಿಸದೇ ಇರುವವರಿಗೆ ಇದರಿಂದ ತೊಂದರೆ ಆಗುವುದಿಲ್ಲ. ಜೊತೆಗೆ ಈಗಿನ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಸಿಮ್‌ ಸ್ಲಾಟ್‌ ತೆಗೆಯಲು ಬಳಸುವ ಎಜೆಕ್ಟರ್‌ ಕಳೆದುಹೋದರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ರಗಳೆಯೂ ಇರುವುದಿಲ್ಲ.

ADVERTISEMENT

ಕ್ಯಾಮೆರಾದ ವಿಷಯದಲ್ಲಿ ತಕ್ಕ ಮಟ್ಟಿಗೆ ತೃಪ್ತಿ ನೀಡುವಂತಹ ಚಿತ್ರಗಳನ್ನು ತೆಗೆಯಬಹುದು. ಮನೆಯೊಳಗೆ ತೆಗೆಯುವ ಚಿತ್ರಗಳಿಗೆ ಹೋಲಿಸಿದರೆ ಹೊರಗಡೆ ಬೆಳಕಿನಲ್ಲಿ ಚಿತ್ರಗಳ ಗುಣಮಟ್ಟ ಹೆಚ್ಚು ಉತ್ತಮವಾಗಿವೆ. ಪ್ರೊ ಮೋಡ್‌ಗೂ ನಾರ್ಮಲ್‌ ಮೋಡ್‌ಗು ಹೇಳಿಕೊಳ್ಳುವಂತಹ ಭಾರಿ ವ್ಯತ್ಯಾಸ ಕಾಣಿಸುವುದಿಲ್ಲ.

ಇದರಲ್ಲಿ ಫೇಸ್‌ ಅನ್‌ಲಾಕ್‌ ಆಯ್ಕೆಯು ಉತ್ತಮವಾಗಿ ಕೆಲಸ ಮಾಡುತ್ತಿದೆ. ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ಆಯ್ಕೆಯು ಫೋನ್‌ನ ಹಿಂಭಾಗದಲ್ಲಿ ನೀಡಲಾಗಿದ್ದು ಇದು ಸಹ ಚೆನ್ನಾಗಿ ಕೆಲಸ ಮಾಡುತ್ತಿದೆ. ಆಡಿಯೊ, ವಿಡಿಯೊ ಗುಣಮಟ್ಟ ತೃಪ್ತಿಕರವಾಗಿದೆ.

ಪ್ರೈಮರಿ ಮೆಮೊರಿ 2 ಜಿಬಿ ಇರುವುದರಿಂದ ಹೆಚ್ಚು ವೇಗವಾಗಿ ಕೆಲಸ ಮಾಡುವುದಿಲ್ಲ. ಕಾಂಟ್ಯಾಕ್ಟ್‌ ಲಿಸ್ಟ್‌ ಅನ್ನು ಸ್ಕ್ರಾಲ್‌ ಡೌನ್ ಮಾಡುವಾಗ, ಆ್ಯಪ್‌ಗಳನ್ನು ಓಪನ್‌ ಮಾಡುವಾಗ ಇದರ ವೇಗ ಕಡಿಮೆ ಇದೆ ಎನ್ನುವುದು ಗಮನಕ್ಕೆ ಬರುತ್ತದೆ. ಮೊಮೊರಿ ಕಡಿಮೆ ಇದ್ದರೂ ಮೈಕ್ರೊಎಸ್‌ಡಿ ಕಾರ್ಡ್ ಹಾಕುವ ಹಾಗೂ ಯುಎಸ್‌ಬಿ ಓಟಿಜಿ ಆಯ್ಕೆ ಇರುವುದರಿಂದ ಅಷ್ಟೇನು ಸಮಸ್ಯೆ ಆಗುವುದಿಲ್ಲ. 4000 ಎಂಎಎಚ್‌ ಬ್ಯಾಟರಿ ಶೇ 100ರಷ್ಟು ಚಾರ್ಜ್‌ ಮಾಡಿದರೆ ದಿನವಿಡೀ ಬಳಸಬಹುದು.

ವೈಶಿಷ್ಟ್ಯ

ಪರದೆ: 6.5 ಇಂಚು ಎಚ್‌ಡಿ ಫ್ಲಸ್‌ ವಾಟರ್‌ಡ್ರಾಪ್‌ ಫುಲ್‌ ಸ್ಕ್ರೀನ್‌ ಡಿಸ್‌ಪ್ಲೇ

ಸಿಪಿಯು: 1.4 ಗಿಗಾಹರ್ಟ್ಸ್‌ ಕ್ವಾಡ್‌ ಕೋರ್‌ ಪ್ರೊಸೆಸರ್

ಒಎಸ್‌: ಆಂಡ್ರಾಯ್ಡ್‌ 10 (ಗೋ ಎಡಿಷನ್‌)

ಸಂಗ್ರಹಣಾ ಸಾಮರ್ಥ್ಯ: 2 ಜಿಬಿ ರ್‍ಯಾಮ್‌, 32 ಜಿಬಿ ಇನ್‌ಬಿಲ್ಟ್‌ ಸ್ಟೊರೇಜ್‌. ಎಸ್‌ಡಿ ಕಾರ್ಡ್‌ ಬಳಿಸಿ 64 ಜಿಬಿವರೆಗೆ ವಿಸ್ತರಣೆ ಸಾಧ್ಯ

ಕ್ಯಾಮೆರಾ: 8ಎಂಪಿ ಮೇನ್‌ ಕ್ಯಾಮೆರಾ, 2 ಕ್ಯುವಿಜಿಎ ಸೆಕೆಂಡರಿ ಲೆನ್ಸ್‌ ಹಾಗೂ ಒಂದು ಎಲ್‌ಇಡಿ ಫ್ಲ್ಯಾಷ್‌

ಸೆಲ್ಫಿ: 5 ಎಂಪಿ

ಬ್ಯಾಟರಿ: 4,000 ಎಂಎಎಚ್‌ ಬ್ಯಾಟರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.