ADVERTISEMENT

ಪೆರುವಿನಲ್ಲಿ 20 ಮಮ್ಮಿಗಳು ಪತ್ತೆ: ಮೌಢ್ಯಾಚರಣೆಗೆ ಬಲಿಯಾಗಿದ್ದ 8 ಮಕ್ಕಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಫೆಬ್ರುವರಿ 2022, 10:44 IST
Last Updated 23 ಫೆಬ್ರುವರಿ 2022, 10:44 IST
ಪೆರುವಿನಲ್ಲಿ ದೊರೆತ ಪುರಾತನ ಮಮ್ಮಿ
ಪೆರುವಿನಲ್ಲಿ ದೊರೆತ ಪುರಾತನ ಮಮ್ಮಿ   

ಲಿಮಾ: ಪೆರು ದೇಶದಲ್ಲಿ 1,200 ವರ್ಷಗಳಷ್ಟು ಹಳೆಯದಾದ 20 ಮಮ್ಮಿಗಳು ಪತ್ತೆಯಾಗಿವೆ. ಇವುಗಳಲ್ಲಿ 12 ವಯಸ್ಕರು ಮತ್ತು 8 ಮಕ್ಕಳ ಮಮ್ಮಿಗಳು ಸೇರಿವೆ ಎಂದು ಪುರಾತತ್ತ್ವಶಾಸ್ತ್ರಜ್ಞರು ಹೇಳಿದ್ದಾರೆ.

ಪೆರುವಿನ ಇಂಕಾ ಸಾಮ್ರಾಜ್ಯದ ಕಾಜಮಾರ್ಕ್ವಿಲ್ಲಾ ಪ್ರದೇಶದಲ್ಲಿ ಕಳೆದ ನವೆಂಬರ್‌ ತಿಂಗಳಲ್ಲಿ ಸ್ಯಾನ್ ಮಾರ್ಕೋಸ್ ವಿಶ್ವವಿದ್ಯಾಲಯದ ಸಂಶೋಧನಾ ತಂಡ ಉತ್ಖನನ ಮಾಡುವಾಗ ಈ ಮಮ್ಮಿಗಳು ಪತ್ತೆಯಾಗಿವೆ.

ಶವಪೆಟ್ಟಿಗೆಯಲ್ಲಿ ಮಮ್ಮಿಗಳನ್ನು ಇಟ್ಟಿರುವ ವಿಧಾನ, ದೇಹದ ಮೇಲಿನ ಗಾಯಗಳನ್ನು ಗಮನಿಸಿದರೆ, ಮೌಢ್ಯ ಆಚರಣೆಯ ಭಾಗವಾಗಿ 12 ವಯಸ್ಕರು ಮತ್ತು 8 ಮಕ್ಕಳನ್ನು ಬಲಿ ನೀಡಿರಬಹುದು ಎಂದು ಪುರಾತತ್ವಶಾಸ್ತ್ರಜ್ಞರು ಅಂದಾಜಿಸಿದ್ದಾರೆ.

ADVERTISEMENT

ಪುರಾತತ್ತ್ವಶಾಸ್ತ್ರಜ್ಞ ಪೀಟರ್ ವ್ಯಾನ್ ಡೇಲೆನ್ ಅವರು ಪತ್ತೆಯಾಗಿರುವ ಮಮ್ಮಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಾಚೀನ ಪೆರುವಿನಲ್ಲಿ ಆಚರಣೆಯಲ್ಲಿದ್ದ ’ಹಿಸ್ಪಾನಿಕ್’ ಆಚರಣೆಯಭಾಗವಾಗಿ 20 ಜನರನ್ನು ಬಲಿಕೊಡಲಾಗಿದೆ. ಮಮ್ಮಿಗಳ ದೇಹದ ಮೇಲೆ ಗಾಯದ ಗುರುತುಗಳು ಇವೆ ಎಂದು ಅವರು ಹೇಳಿದ್ದಾರೆ.

ಹಿಸ್ಪಾನಿಕ್‌ ಆಚರಣೆಯಲ್ಲಿ ಬಲಿಕೊಡುವುದು ಒಂದು ಭಾಗವಾಗಿದೆ. ಈಆಚರಣೆಯಲ್ಲಿಬಲಿಯಾದವರ ’ಆತ್ಮಗಳು’ ಸಮಾಜದಲ್ಲಿ ಬದುಕಿರುವವರಿಗೆ ರಕ್ಷಕರಾಗಿ ಕೆಲಸ ಮಾಡುತ್ತವೆ ಎಂಬ ಪ್ರತೀತಿ ಇತ್ತು. ಈಸಾಮ್ರಾಜ್ಯದ ಜನರು ಸಾವು ಅಂತ್ಯವಲ್ಲ ಎಂಬ ಭಾವನೆ ಹೊಂದಿದ್ದರುಎಂದು ಡೇಲೆನ್ ಹೇಳಿದ್ದಾರೆ.

ಮಮ್ಮಿಗಳ ದೊರೆತ ಪಿರಮಿಡ್‌ನಲ್ಲಿ ಶವಸಂಸ್ಕಾರದ ವಸ್ತುಗಳ ಜೊತೆಗೆ ಸಂಗೀತ ಕಲಾಕೃತಿಗಳು, ಸಂಗೀತ ವಾದ್ಯಗಳನ್ನೂ ಇಡಲಾಗಿತ್ತು ಎಂದು ಡೇಲೆನ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.