ADVERTISEMENT

ಚೀನಾ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೆಂಗ್‌ಟಿಯಾನ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 11:23 IST
Last Updated 1 ನವೆಂಬರ್ 2022, 11:23 IST
ಚೀನಾದ ಟಿಯಾಂಗೊಂಗ್‌ ಅಂತರಿಕ್ಷ ನೆಲೆಯಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಮೆಂಗ್‌ ಟಿಯಾನ್ ಯಶಸ್ವಿ ಉಡಾವಣೆ –ಎಎಫ್‌ಪಿ ಚಿತ್ರ
ಚೀನಾದ ಟಿಯಾಂಗೊಂಗ್‌ ಅಂತರಿಕ್ಷ ನೆಲೆಯಿಂದ ಬಾಹ್ಯಾಕಾಶ ನಿಲ್ದಾಣಕ್ಕೆ ಮೆಂಗ್‌ ಟಿಯಾನ್ ಯಶಸ್ವಿ ಉಡಾವಣೆ –ಎಎಫ್‌ಪಿ ಚಿತ್ರ   

ಬೀಜಿಂಗ್ (ಎ.ಪಿ): ಅಂತರಿಕ್ಷ ಕಕ್ಷೆಯಲ್ಲಿ ತನ್ನ ಅಸ್ತಿತ್ವ ಬಲಪಡಿಸುವುದರ ಭಾಗವಾಗಿ ಮೂರು ಮತ್ತು ಅಂತಿಮ ಹಂತದ ಪರಿಕರಗಳನ್ನು ಹೊತ್ತ ಮೆಂಗ್‌ಟಿಯಾನ್ ಅನ್ನು ತನ್ನ ಶಾಶ್ವತ ಬಾಹ್ಯಾಕಾಶ ನಿಲ್ದಾಣಕ್ಕೆ ಮಂಗಳವಾರ ತಲುಪಿಸುವಲ್ಲಿಚೀನಾ ಯಶಸ್ವಿಯಾಯಿತು.

ಮೆಂಗ್‌ಟಿಯಾನ್‌ ಎಂದು ಹೆಸರಿಸಲಾದ ಅಂತಿಮ ಹಂತದ ಪರಿಕರಗಳಿದ್ದ ವಾಹಕವು ಟಿಯಾಂಗೊಂಗ್ ನಿಲ್ದಾಣಕ್ಕೆ ಮಂಗಳವಾರ ಬೆಳಿಗ್ಗೆ ತಲುಪಿದೆ ಎಂದು ಸರ್ಕಾರದ ಅಧಿಕೃತ ವಾಹಿನಿ ಸಿಸಿಟಿವಿ, ಚೀನಾದ ಬಾಹ್ಯಾಕಾಶ ಸಂಸ್ಥೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.

ವೆನ್‌ಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸೋಮವಾರ ಈ ಮೆಂಗ್‌ಟಿಯಾನ್‌ ಅನ್ನು ಉಡಾವಣೆ ಮಾಡಲಾಗಿತ್ತು. ಇದು, ಅಂತಿಮ ಗುರಿಯನ್ನು ತಲುಪಲು 13 ಗಂಟೆಯ ಅವಧಿಯನ್ನು ತೆಗೆದುಕೊಂಡಿತು.

ADVERTISEMENT

ದೇಶದ ಅಂತರಿಕ್ಷ ಕಾರ್ಯಕ್ರಮಗಳು ರಾಷ್ಟ್ರೀಯ ಭದ್ರತಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ನೆರವಾಗಲಿವೆ ಎಂದು ಚೀನಾದ ಶಾಂಘೈ ರಾಜಕೀಯ ವಿಜ್ಞಾನ ಮತ್ತು ಕಾನೂನು ವಿಶ್ವವಿದ್ಯಾಲಯದ ಪ್ರೊಫೆಸರ್ ನಿ ಲೆಕ್ಸಿಯೊಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.