ADVERTISEMENT

ಚೀನಾ ಗಗನಯಾತ್ರಿಗಳಿಂದ ಬಾಹ್ಯಾಕಾಶದಲ್ಲಿ ನಡಿಗೆ

ಏಜೆನ್ಸೀಸ್
Published 4 ಜುಲೈ 2021, 11:43 IST
Last Updated 4 ಜುಲೈ 2021, 11:43 IST
ಚೀನಾ ಬಾಹ್ಯಾಕಾಶ ಕೇಂದ್ರದ ಸಂಗ್ರಹ ಚಿತ್ರ
ಚೀನಾ ಬಾಹ್ಯಾಕಾಶ ಕೇಂದ್ರದ ಸಂಗ್ರಹ ಚಿತ್ರ   

ಬೀಜಿಂಗ್‌: ಚೀನಾದ ಇಬ್ಬರು ಗಗನಯಾತ್ರಿಗಳು ಭಾನುವಾರ ಚೀನಾದ ನೂತನ ಬಾಹ್ಯಾಕಾಶ ಕೇಂದ್ರದ ಹೊರಗೆ ನಡೆದಾಡಿದ್ದು, 15 ಮೀಟರ್ ಉದ್ದದ ರೊಬೊಟಿಕ್‌ ರೆಕ್ಕೆ ಸರಿಪಡಿಸುವ ಕಾರ್ಯ ನಡೆಸಿದರು.

ಲಿಯು ಬೊಮಿಂಗ್, ತಂಗ್‌ ಹಾಂಗ್‌ಬೊ ಈ ಗಗನಯಾತ್ರಿಗಳು. ಚೀನಾ ಟಿ.ವಿ. ಇದನ್ನು ಪ್ರಸಾರ ಮಾಡಿದ್ದು, ಗಗನಯಾತ್ರಿಗಳು ಹೊರಬಂದಾಗ ಬಾಹ್ಯಾಕಾಶ ಕೇಂದ್ರದ ಕೆಳಗೆ ಭೂಮಿಯ ಪರಿಭ್ರಮಣವೂ ದಾಖಲಾಗಿದೆ.

ಮತ್ತೊಬ್ಬ ಗಗನಯಾತ್ರಿ ನೇ ಹೈಶೆಂಗ್‌ ಕೇಂದ್ರದ ಒಳಗಿದ್ದರು. ಚೀನಾದ ಮೂರನೇ ಬಾಹ್ಯಾಕಾಶ ಕೇಂದ್ರದಲ್ಲಿ ಈ ಮೂವರು ಮಂಗಳ ಗ್ರಹದ ಮೇಲೆ ರೊಬೋಟ್‌ ರೋವರ್ ಇಳಿಸುವ ಮಿಷನ್‌ನ ಭಾಗವಾಗಿ ಜೂನ್‌ 17ರಂದು ಬಂದಿದ್ದರು. ಚೀನಾದ ಕಮ್ಯುನಿಸ್ಟ್ ಪಕ್ಷದ 100ನೇ ವರ್ಷದ ಸಂದರ್ಭದಲ್ಲಿ ಇದು ಕಾರ್ಯಗತವಾಗುತ್ತಿದೆ.

ADVERTISEMENT

ಬಾಹ್ಯಾಕಾಶ ಕೇಂದ್ರದ ಮೊದಲ ಮಾದರಿ ‘ಟಿಯಾನೆ’ ಅನ್ನು ಏಪ್ರಿಲ್‌ 29ರಂದು ಉಡಾವಣೆ ಮಾಡಲಾಗಿತ್ತು. ತದನಂತರ ಆಹಾರ ಮತ್ತು ಇಂಧನವನ್ನು ಹೊತ್ತ ಸ್ವಯಂಚಾಲಿಯ ಅಂತರಿಕ್ಷ ನೌಕೆಯನ್ನು ಕಳುಹಿಸಲಾಗಿತ್ತು. ಜೂನ್‌ 17ರಂದು ಮೂವರು ಗಗನಯಾತ್ರಿಗಳು ಬಾಹ್ಯಾಕಾಶ ಕೇಂದ್ರವನ್ನು ಸೇರಿಕೊಂಡಿದ್ದರು.

ಚೀನಾ ಮುಂದಿನ ವರ್ಷದ ಅಂತ್ಯದ ವೇಳೆಗೆ 11 ಅಂತರಿಕ್ಷ ನೌಕೆ ಉಡಾವಣೆ ಮಾಡುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.