ADVERTISEMENT

ಕೊರೊನಾ ವೈರಸ್‌ಗೆ ಔಷಧ ಸಂಶೋದನೆ: ಇಲಿಗಳ ಮೇಲಿನ ಪ್ರಯೋಗ ಆಶಾದಾಯಕ

ಪಿಟಿಐ
Published 31 ಮೇ 2021, 8:12 IST
Last Updated 31 ಮೇ 2021, 8:12 IST
   

ನವದೆಹಲಿ: ಕೋವಿಡ್‌ ಇರುವ ಇಲಿಗಳಲ್ಲಿ 'ಸಾರ್ಸ್‌ ಕೋವ್‌-2' ಮಾದರಿಯ ವೈರಸ್‌ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲ ಔಷಧವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಅಲ್ಲದೆ, ಉಸಿರಾಟ ವ್ಯವಸ್ಥೆ ಮೇಲೆ ದಾಳಿ ಮಾಡುವ ಇತರ ಕೊರೊನಾ ವೈರಸ್‌ಗಳ ಮೇಲೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ 'ಪೆರೆಲ್ಮನ್ ಸ್ಕೂಲ್ ಆಫ್ ಮೆಡಿಸಿನ್' ವಿಜ್ಞಾನಿಗಳ ಸಂಶೋಧನೆ 'ಸೈನ್ಸ್‌ ಇಮ್ಯುನೊಲಜಿ' ಜರ್ನಲ್‌ನಲ್ಲಿ ಪ್ರಕಟವಾಗಿದೆ. 'ಸದ್ಯ ಪತ್ತೆಯಾಗಿರುವ ಔಷಧ-diABZI ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಪ್ರಚೋಧಿಸುತ್ತದೆ. ವೈರಸ್‌ ವಿರುದ್ಧದ ಮುಂಚೂಣಿ ಶಕ್ತಿಯನ್ನು ಉದ್ದೀಪಿಸುತ್ತದೆ,' ಎಂದು ಬರೆಯಲಾಗಿದೆ.

'ಒಂದೇ ಡೋಸ್‌ ಔಷಧಿಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿರುವುದು ಅಧ್ಯಯನಗಳಿಂದ ಗೊತ್ತಾಗಿದೆ. ದಕ್ಷಿಣ ಅಫ್ರಿಕಾ ಮಾದರಿಯ ಕೊರೊನಾ ವೈರಸ್‌ ತಳಿಯನ್ನೂ ಈ ಔಷಧ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಾರಾ ಚೆರ್ರಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.