ADVERTISEMENT

ನಾಸಾ ವಿಡಿಯೊ: 3,000 ಕೆಜಿ ವೈಜ್ಞಾನಿಕ ಸರಕು ಹೊತ್ತ ಸ್ಪೇಸ್‌ಎಕ್ಸ್‌

ಏಜೆನ್ಸೀಸ್
Published 6 ಜೂನ್ 2021, 12:45 IST
Last Updated 6 ಜೂನ್ 2021, 12:45 IST
ಸ್ಪೇಸ್‌ಎಕ್ಸ್‌ ಡ್ರಾಗನ್‌ ನೌಕೆ
ಸ್ಪೇಸ್‌ಎಕ್ಸ್‌ ಡ್ರಾಗನ್‌ ನೌಕೆ   

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅಗತ್ಯ ಉಪಕರಣಗಳು ಮತ್ತು ಗಗನಯಾತ್ರಿಗಳಿಗೆ ತಾಜಾ ನಿಂಬೆಹಣ್ಣು, ಈರುಳ್ಳಿ, ಅವಾಕೆಡೊ ಹಣ್ಣುಗಳು ಮತ್ತು ಕೆಂಪಾದ ಟೊಮೊಟೊ ಹಣ್ಣುಗಳನ್ನು ಹೊತ್ತು ಸಾಗಿದ ಸ್ಪೇಸ್‌ಎಕ್ಸ್‌ ಡ್ರಾಗನ್‌ ಗಗನನೌಕೆಯ ವಿಡಿಯೊವನ್ನು ನಾಸಾ ಪೋಸ್ಟ್‌ ಮಾಡಿದೆ.

ಶನಿವಾರ ಬೆಳಗ್ಗೆ ಬಾಹ್ಯಾಕಾಶ ನಿಲ್ದಾಣದತ್ತ ಹಾರುತ್ತಿದ್ದಾಗ ಸೆರೆ ಹಿಡಿದ ವಿಡಿಯೊ ಇದಾಗಿದೆ. ಬಾಹ್ಯಾಕಾಶ ನಿಲ್ದಾಣವನ್ನು ತಲುಪಲು ಸ್ಪೇಸ್‌ಎಕ್ಸ್‌ ಡ್ರಾಗನ್‌ ಪ್ರಯಾಣ ಮುಂದುವರಿಸಿದೆ ಎಂದು ಟ್ವಿಟರ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಸ್ಪೇಸ್‌ಎಕ್ಸ್‌ ನೌಕೆಯು 7,300 ಪೌಂಡ್‌ (3,300 ಕೆಜಿ) ತೂಕದ ಸಾಮಾನನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಗಿಸುತ್ತಿದೆ. ಇದರಲ್ಲಿ ವೈಜ್ಞಾನಿಕ ಪ್ರಯೋಗಗಳು, ಹೊಸ ಸೌರ ರಚನೆಗಳು ಮತ್ತು ಇತರ ಸರಕು ಇದೆ. ಜೊತೆಗೆ ಗಗನಯಾತ್ರಿಗಳಿಗಾಗಿ ತಾಜಾ ನಿಂಬೆಹಣ್ಣು, ಈರುಳ್ಳಿ, ಅವಾಕಡೊ ಹಣ್ಣು, ಕೆಂಪಾದ ಟೊಮೊಟೊ ಹಣ್ಣುಗಳು ಮತ್ತಿತರ ವಸ್ತುಗಳನ್ನು ಸೇರಿಸಲಾಗಿದೆ.

ADVERTISEMENT

ಫ್ಲೋರಿಡಾದ ನಾಸಾ ಕೆನ್ನಡಿ ಬಾಹ್ಯಾಕಾಶ ನೌಕೆ ಉಡ್ಡಯನ ಕೇಂದ್ರದಿಂದ ಫಾಲ್ಕನ್‌ 9 ರಾಕೆಟ್‌ ಮೂಲಕ ಸ್ಪೇಸ್‌ಎಕ್ಸ್‌ಅನ್ನು ಉಡಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.