ADVERTISEMENT

ಮಲೇರಿಯ ಸೊಳ್ಳೆಗಳ ಸಮಗ್ರ ವಂಶವಾಹಿ ಪತ್ತೆ

ಪಿಟಿಐ
Published 11 ಫೆಬ್ರುವರಿ 2021, 18:07 IST
Last Updated 11 ಫೆಬ್ರುವರಿ 2021, 18:07 IST
   

ನವದೆಹಲಿ: ಮಲೇರಿಯ ಹರಡಲು ಕಾರಣ ವಾಗುವ ಸೊಳ್ಳೆಯ ವಿವರವಾದ ವಂಶವಾಹಿಯನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ರೋಗ ಹರಡುವು ದನ್ನು ತಡೆಯಲು ಕಾರ್ಯತಂತ್ರ ರೂಪಿಸಲು ಇದು ಸಹಕಾರಿ ಆಗಲಿದೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಯೋಜನಾ ವಿಜ್ಞಾನಿ ಮಹುಲ್ ಚಕ್ರವರ್ತಿಮತ್ತು ಅವರ ಸಹೋದ್ಯೋಗಿಗಳು, ಏಷ್ಯಾಭಾಗದಲ್ಲಿ ಮಲೇರಿಯ ಹರಡುವ ಸೊಳ್ಳೆಯ ಹೊಸ ತಳಿಯನ್ನು ಗುರುತಿಸಿದ್ದಾರೆ. ಅನಫೆಲಿಸ್ ಸ್ಟೆಫೆನ್ಸಿ ಎಂಬುದು ಮಲೇರಿಯ ಹರಡಲು ಕಾರಣವಾಗುವ ಪ್ರಮುಖ ಸೊಳ್ಳೆಯ ತಳಿಯಾಗಿದೆ. ದಕ್ಷಿಣ ಏಷ್ಯಾದನಗರ ಪ್ರದೇಶಗಳಲ್ಲಿ ಕಾಣಿಸುತ್ತದೆ. ಇತ್ತೀಚೆಗೆ ಆಫ್ರಿಕಾದಲ್ಲಿ ಕಾಣಿಸಿಕೊಂಡಿದೆ.

ವಂಶವಾಹಿ ಅಧ್ಯಯನ ಸಂಬಂಧಿತ ಸಿಆರ್‌ಐಎಸ್‌ಪಿಆರ್ ತಂತ್ರಜ್ಞಾನದ ನೆರವಿನಲ್ಲಿ ಸಂಶೋಧಕರು ಸುಲಭವಾಗಿ ಸೊಳ್ಳೆಗಳ ವಂಶವಾಹಿ ಗುರುತಿಸಬಹುದಾಗಿದೆ ಹಾಗೂ ಅದರ ಕಾರ್ಯನಿರ್ವಹಣೆಯನ್ನು ಪರಿಷ್ಕರಿಸಬಹುದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.