ADVERTISEMENT

ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಹಿಮದ ದಿಬ್ಬಗಳು ಪತ್ತೆ

ಏಜೆನ್ಸೀಸ್
Published 30 ಮಾರ್ಚ್ 2022, 12:55 IST
Last Updated 30 ಮಾರ್ಚ್ 2022, 12:55 IST
ಪ್ಲುಟೊ ಗ್ರಹದ ಮೇಲಿನ ಹಿಮದ ದಿಬ್ಬಗಳನ್ನು ತೋರುವ ಈ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ
ಪ್ಲುಟೊ ಗ್ರಹದ ಮೇಲಿನ ಹಿಮದ ದಿಬ್ಬಗಳನ್ನು ತೋರುವ ಈ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ –ಎಎಫ್‌ಪಿ ಚಿತ್ರ   

ಪ್ಯಾರಿಸ್: ಸೌರಮಂಡಲದ ಕೊನೆಯ ಗ್ರಹ ಪ್ಲುಟೊದಲ್ಲಿ ಭಾರಿಗಾತ್ರದ ಹಿಮದ ದಿಬ್ಬಗಳಿದ್ದವು. ಗ್ರಹದ ಮೇಲ್ಮೈಯಲ್ಲಿ ಕಂಡುಬರುವ ಹಿಮದ ರಾಶಿಗಳು ಇಂಥ ದಿಬ್ಬಗಳು ಇದ್ದವು ಎಂಬುದನ್ನು ಸೂಚಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಾಸಾದ ‘ನ್ಯೂ ಹಾರಿಜನ್’ ಗಗನನೌಕೆಯು ಕಳಿಸಿರುವ ಚಿತ್ರಗಳನ್ನು ವಿಶ್ಲೇಷಿಸಿದ ನಂತರ ವಿಜ್ಞಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಪ್ಲುಟೊದ ವಾತಾವರಣವು ಈ ಮೊದಲು ಭಾವಿಸಿದ್ದಕ್ಕಿಂತ ಹೆಚ್ಚು ಉಷ್ಣತೆಯಿಂದ ಕೂಡಿತ್ತು ಎಂಬುದು ಈ ವಿದ್ಯಮಾನದಿಂದ ತಿಳಿದುಬರುತ್ತದೆ ಎಂದು ‘ನೇಚರ್ ಕಮ್ಯುನಿಕೇಷನ್ಸ್’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಮಂಜುಗಡ್ಡೆ ಮಿಶ್ರಿತ ನೀರು ಗ್ರಹದ ಮೇಲ್ಮೈಯಲ್ಲಿ ಒಸರುತ್ತದೆ. ಕೆಲವೊಮ್ಮೆ ಮಂಜುಗಡ್ಡೆಗಳೇ ಕರಗಿ ತೇಲಲು ಆರಂಭಿಸುತ್ತವೆ. ಇವು ಕಾಲಾನಂತರ ದಿಬ್ಬಗಳಾಗುತ್ತವೆ ಎಂದು ಕೊಲೊರಾಡೊದಲ್ಲಿರುವ ಸೌತ್‌ವೆಸ್ಟ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ವಿಜ್ಞಾನಿ ಕೆಲ್ಸಿ ಸಿಂಗರ್ ಹೇಳಿದ್ದಾರೆ.

ADVERTISEMENT

‘ಈ ಹಿಮದ ದಿಬ್ಬಗಳು ಯಾವಾಗ ರಚನೆಯಾದವು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಕೆಲ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿರಬಹುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.