ADVERTISEMENT

ಭಾರತಕ್ಕೆ ಸೇರಿದ 114 ‘ಬಾಹ್ಯಾಕಾಶ ಅವಶೇಷ’ಗಳು ಭೂಕಕ್ಷೆಯಲ್ಲಿ

ಪಿಟಿಐ
Published 10 ಏಪ್ರಿಲ್ 2022, 13:38 IST
Last Updated 10 ಏಪ್ರಿಲ್ 2022, 13:38 IST
ಜಿತೇಂದ್ರ ಸಿಂಗ್
ಜಿತೇಂದ್ರ ಸಿಂಗ್   

ನವದೆಹಲಿ: ಭಾರತಕ್ಕೆ ಸೇರಿದ ಒಟ್ಟು 217 ಬಾಹ್ಯಾಕಾಶ ವಸ್ತುಗಳು ಭೂಕಕ್ಷೆಯಲ್ಲಿವೆ. ಈ ಪೈಕಿ ನಿಷ್ಕ್ರಿಯಗೊಂಡಿರುವ ವಸ್ತುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ಕುರಿತು ಸಂಶೋಧನೆ ನಡೆಯುತ್ತಿದೆ ಎಂದು ಪಿಎಂಒ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸಂಸತ್‌ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ‘ಒಟ್ಟು 103 ಗಗನನೌಕೆಗಳು ಹಾಗೂ ‘ಬಾಹ್ಯಾಕಾಶ ಅವಶೇಷ’ಗಳು ಎಂದು ವರ್ಗೀಕರಿಸಲಾಗುವ 114 ವಸ್ತುಗಳು ಈ ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ’ ಎಂದು ಹೇಳಿದ್ದಾರೆ.

‘ಈ ‘ಬಾಹ್ಯಾಕಾಶ ಅವಶೇಷ’ವನ್ನು ತೆರವುಗೊಳಿಸುವ ತಂತ್ರಜ್ಞಾನ ಹಾಗೂ ಇದು ಎಷ್ಟರ ಮಟ್ಟಿಗೆ ಕಾರ್ಯಸಾಧು ಎಂಬ ಬಗ್ಗೆ ಇಸ್ರೊ ಸಂಶೋಧನೆ ನಡೆಸುತ್ತಿದೆ’.

ADVERTISEMENT

‘ಬಾಹ್ಯಾಕಾಶ ಅವಶೇಷ’ಗಳ ತೆರವು ಕಾರ್ಯದಲ್ಲಿ ಇಸ್ರೊದೊಂದಿಗೆ ಸಮನ್ವಯ ಸಾಧಿಸುವ ಸಲುವಾಗಿ ಬೆಂಗಳೂರಿನಲ್ಲಿ ನಿಯಂತ್ರಣ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ ಎಂದೂ ಅವರು ಸದನಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.