ADVERTISEMENT

ಮಂಗಳ ಗ್ರಹಣದ ಕೌತುಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 19:50 IST
Last Updated 17 ಏಪ್ರಿಲ್ 2021, 19:50 IST
ಗ್ರಹಣ ಮುಗಿದ ಬಳಿಕ ಚಂದ್ರನ ಬಳಿ ಬೆಳ್ಳಿ ಚುಕ್ಕೆಯಂತೆ ಕಾಣಿಸಿಕೊಂಡ ಮಂಗಳಗ್ರಹ
ಗ್ರಹಣ ಮುಗಿದ ಬಳಿಕ ಚಂದ್ರನ ಬಳಿ ಬೆಳ್ಳಿ ಚುಕ್ಕೆಯಂತೆ ಕಾಣಿಸಿಕೊಂಡ ಮಂಗಳಗ್ರಹ   

ಉಡುಪಿ: ಶನಿವಾರ ಸಂಜೆ 6.55ರ ಹೊತ್ತಿಗೆ ಆಕಾಶದಲ್ಲಿ ಮಂಗಳ ಗ್ರಹಣದ ಕೌತುಕ ಕಾಣಿಸಿತು. ಅಪರೂಪದ ಖಗೋಳ ವಿದ್ಯಮಾನವನ್ನು ಖಗೋಳಾಸಕ್ತರು ದೂರದರ್ಶಕಗಳಲ್ಲಿ ಕಣ್ತುಂಬಿಕೊಂಡರು.

ಸಂಜೆ 5.08ಕ್ಕೆ ಚಂದ್ರನಿಗೆ ಸಮೀಪದಲ್ಲಿ ಕಾಣಿಸಿಕೊಂಡ ಮಂಗಳ ಕೆಲವೇ ಕ್ಷಣಗಳಲ್ಲಿ ಮರೆಯಾಯಿತು. ಚಂದ್ರ ಆವರಿಸಿಕೊಂಡ ಪರಿಣಾಮ ಮಂಗಳ ಗ್ರಹ ಕೆಲಹೊತ್ತು ಕಾಣಲಿಲ್ಲ. ಬಳಿಕ 6.55ರ ಹೊತ್ತಿಗೆ ಮತ್ತೆ ಮಂಗಳ ಗ್ರಹವು ಚಂದ್ರನ ಪ್ರಕಾಶಮಾನವಾದ ಭಾಗದ ಬಳಿ ಬೆಳ್ಳಿಯ ಚುಕ್ಕೆಯಂತೆ ಗೋಚರಿಸಿತು. ಈ ಮೂಲಕ ಚಂದ್ರನ ಅಚ್ಛಾದನೆಯು (ಮಂಗಳ ಗ್ರಹಣ) ಪೂರ್ಣಗೊಂಡಿತು.

ಹಿಂದೆ ಚಂದ್ರನ ಅಚ್ಛಾದನೆಯು ಆಫ್ರಿಕಾ ಹಾಗೂ ಅಮೆರಿಕಾದಲ್ಲಿ ಕಾಣಿಸಿಕೊಂಡಿತ್ತು ಎಂದು ಪೂರ್ಣ ಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.