ADVERTISEMENT

ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 4:22 IST
Last Updated 27 ಸೆಪ್ಟೆಂಬರ್ 2022, 4:22 IST
ಕ್ಷುದ್ರಗ್ರಹ ‘ಡಿಮೊರ್ಫಾಸ್’
ಕ್ಷುದ್ರಗ್ರಹ ‘ಡಿಮೊರ್ಫಾಸ್’   

ಲಾರೆಲ್ (ಅಮೆರಿಕ): ಕ್ಷುದ್ರಗ್ರಹ ಅಥವಾ ಧೂಮಕೇತುಗಳಿಂದ ಎದುರಾಗುವ ಸಂಭಾವ್ಯ ಅಪಾಯಗಳ ವಿರುದ್ಧ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊದಲ ಕಾರ್ಯಾಚರಣೆಯನ್ನು ನಾಸಾ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ನಾಸದ ಬಾಹ್ಯಾಕಾಶ ನೌಕೆ ‘ಡಾರ್ಟ್‌ ( ಡಬಲ್‌ ಅಸ್ಟ್ರಾಯ್ಡ್‌ ರೀಡೈರೆಕ್ಷನ್‌ ಟೆಸ್ಟ್‌ – ಕ್ಷುದ್ರಗ್ರಹದ ಪಥ ಬದಲಿಸುವ ಪರೀಕ್ಷೆ)’ ಕ್ಷುದ್ರಗ್ರಹ ‘ಡಿಮೊರ್ಫಾಸ್’ಗೆ ಹೈಪರ್‌ ಸಾನಿಕ್‌ ವೇಗದಲ್ಲಿ ಡಿಕ್ಕಿ ಹೊಡೆದಿದೆ.

530 ಅಡಿ ಅಗಲದ ಕ್ಷುದ್ರಗ್ರಹದ ಪಥ ಬದಲಿಸುವ ಸಲುವಾಗಿ ಅದರ ಮೇಲೆ ಬಾಹ್ಯಾಕಾಶ ನೌಕೆಯು ಡಿಕ್ಕಿ ಹೊಡೆಯಿತು.

ADVERTISEMENT

ಭೂಮಿಯಿಂದ 7 ದಶಲಕ್ಷ ಮೈಲುಗಳ (11 ದಶಲಕ್ಷ ಕಿಲೋಮೀಟರ್) ದೂರದಲ್ಲಿ ಈ ವಿದ್ಯಮಾನ ನಡೆದಿದೆ.

ಈ ಪರೀಕ್ಷೆಗಾಗಿ ‘ಡಾರ್ಟ್‌’ ಅನ್ನು ಹತ್ತು ತಿಂಗಳ ಹಿಂದೆ ನಭಕ್ಕೆ ಉಡಾಯಿಸಲಾಗಿತ್ತು.

ಚಲನ ಶಕ್ತಿಯನ್ನು ಬಳಸಿಕೊಂಡು ಕ್ಷುದ್ರಗ್ರಹದ ಪಥವನ್ನು ಬದಲಾಯಿಸುವ ಸಾಮರ್ಥ್ಯವನ್ನು ಬಾಹ್ಯಾಕಾಶ ನೌಕೆಯು ಹೊಂದಿದೆಯೇ ಎಂದು ಅವಲೋಕಿಸಲು ಈ ಕಾರ್ಯಾಚರಣೆಯನ್ನು ರೂಪಿಸಲಾಗಿತ್ತು. ಭೂಮಿಗೆ ಆಕಾಶ ಕಾಯಗಳಿಂದ ಹಾನಿಯಾಗದಂತೆ ತಡೆಯುವುದು ಇದರ ಉದ್ದೇಶವಾಗಿತ್ತು.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.