ADVERTISEMENT

ಮೊದಲ ಬಾರಿಗೆ ಮಹಿಳೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ ಸೌದಿ ಅರೇಬಿಯಾ!

ಏಜೆನ್ಸೀಸ್
Published 14 ಫೆಬ್ರುವರಿ 2023, 6:46 IST
Last Updated 14 ಫೆಬ್ರುವರಿ 2023, 6:46 IST
ರಯಾನಾ ಬರ್ನಾವಿ
ರಯಾನಾ ಬರ್ನಾವಿ    

ರಿಯಾದ್: ಸಂಪ್ರದಾಯಿಕ ರಾಷ್ಟ್ರ ಎನಿಸಿಕೊಂಡಿರುವ ಹಾಗೂ ತೈಲ ಸಮೃದ್ಧಿ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಇದೇ ಮೊದಲ ಬಾರಿಗೆ ತನ್ನ ಮಹಿಳೆಯೊಬ್ಬರನ್ನು ಅಂತರಿಕ್ಷಯಾನಕ್ಕೆ ಕಳುಹಿಸುತ್ತಿದೆ.

ಹೌದು, 27 ವರ್ಷದ ರಯಾನಾ ಬರ್ನಾವಿ (Rayyana Barnawi) ಎಂಬ ಖಗೋಳ ವಿಜ್ಞಾನಿಯನ್ನು ಈ ವರ್ಷಾಂತ್ಯಕ್ಕೆ ಗಗನಯಾನಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಈ ಕುರಿತು ಸೌದಿ ಅರೇಬಿಯಾದ ಸೌದಿ ಪ್ರೆಸ್ ಏಜೆನ್ಸಿ ಹೇಳಿಕೆ ಆಧರಿಸಿ ಎಎಫ್‌ಪಿ ವರದಿ ಮಾಡಿದೆ.

ADVERTISEMENT

ಸೆಪ್ಟೆಂಬರ್‌ನಲ್ಲಿ ಅಮೆರಿಕದಿಂದ ಉಡಾವಣೆಯಾಗಲಿರುವ ‘ಎಎಕ್ಸ್‌ 2 ಸ್ಪೇಸ್’ ಮಿಷನ್ ಮೂಲಕ ಅವರು ಅಂತರರಾಷ್ಟ್ರೀಯ ಬಾಹಾಕ್ಯಾಶ ನಿಲ್ದಾಣಕ್ಕೆ (ISS) ತೆರಳಿ ಅಲ್ಲಿ 8 ದಿನ ಕೆಲಸ ಮಾಡಿ ಬರಲಿದ್ದಾರೆ.

ಸೌದಿ ಅರೇಬಿಯಾದ ಮೊದಲ ಗಗನಯಾನಿ ಹಾಗೂ ಸುಲ್ತಾನ್ ಆಫ್ ಸ್ಪೇಸ್ ಎಂದು ಹೆಸರಾದ ಸುಲ್ತಾನ್ ಅಲ್ ನೇಯಾದಿ ಹಾಗೂ ಹಜ್ಜಾ ಅಲ್ ಮನ್ಸೂರಿ ಅವರೊಂದಿಗೆ ರಯಾನಾ ಪ್ರಯಾಣ ಬೆಳಸಲಿದ್ದಾರೆ.

ಗಲ್ಫ್ ದೇಶಗಳಲ್ಲಿ ಮೊದಲ ಬಾರಿಗೆ ಯುಎಇ ದೇಶ 2019 ರಲ್ಲಿ ಮೊದಲ ಬಾರಿಗೆ ತನ್ನ ಗಗನಯಾನಿಯನ್ನು ಅಂತರಿಕ್ಷಕ್ಕೆ ಕಳಿಸಿತ್ತು. ಮೂಲಭೂತವಾದಿ ರಾಷ್ಟ್ರ ಎಂಬ ಹಣೆಪಟ್ಟಿ ಕಳಚಲು ಸೌದಿ ದೊರೆ ಮಹಮ್ಮದ್ ಬಿನ್ ಸಲ್ಮಾನ್ ಅವರು ಬಾಹ್ಯಾಕಾಶ ಕ್ಷೇತ್ರಕ್ಕೆ ಮಹಿಳೆಯರಿಗೆ ಅವಕಾಶ ಇರಲಿ ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.