ADVERTISEMENT

ಮಹಿಳಾ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳುಹಿಸ ಲಿರುವಸೌದಿ ಅರೇಬಿಯಾ

ಏಜೆನ್ಸೀಸ್
Published 14 ಫೆಬ್ರುವರಿ 2023, 11:47 IST
Last Updated 14 ಫೆಬ್ರುವರಿ 2023, 11:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಿಯಾದ್ (ಎಎಫ್‌ಪಿ): ಸೌದಿ ಆರೇಬಿಯಾ ತನ್ನ ಅಂತರಿಕ್ಷ ಯಾನ ಯೋಜನೆಯಡಿ ಪ್ರಥಮಬಾರಿಗೆ ಮಹಿಳಾ ಗಗನಯಾತ್ರಿಯೊಬ್ಬರನ್ನು ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅಂತರಿಕ್ಷಕ್ಕೆ ಕಳುಹಿಸಲಿದೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.

ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್) ತೆರಳುವ ಯೋಜನೆಯಡಿ ದೇಶದ ಪುರುಷ ಗಗನಯಾತ್ರಿ ಅಲಿ ಅಲ್ ಖಾರ್ನಿ ಅವರ ಜೊತೆಗೆ ಮಹಿಳಾ ಗಗನಯಾತ್ರಿ ರಯ್ಯಾನ ಬರ್ನಾವಿ ಅವರೂ ತೆರಳಲಿದ್ದಾರೆ.

ಈ ಇಬ್ಬರೂ ಗಗನಯಾತ್ರಿಗಳು, ಅಮೆರಿಕದಿಂದ ಕಕ್ಷೆಗೆ ಉಡಾವಣೆಗೊಳ್ಳಲಿರುವ ಎಎಕ್ಸ್‌–2 ಅಂತರಿಕ್ಷ ಯೋಜನೆಯ ನೌಕೆಯಲ್ಲಿ ಇತರೆ ಗಗನಯಾತ್ರಿಗಳನ್ನು ಸೇರಿಕೊಳ್ಳಲಿದ್ದಾರೆ ಎಂದು ಅಧಿಕೃತ ಮಾಧ್ಯಮ ವರದಿ ಮಾಡಿದೆ.

ADVERTISEMENT

ನೆರೆಯ ಯುಎಇ 2019ರಲ್ಲಿ ಮೊದಲ ಬಾರಿಗೆ ತನ್ನ ಪ್ರಜೆಯೊಬ್ಬರನ್ನು ಅಂತರಿಕಕ್ಕೆ ಕಳುಹಿಸಿತ್ತು. ಈಗ ಸೌದಿ ಅರೇಬಿಯಾ ಕೂಡಾ ತನ್ನ ನೆರೆಯ ರಾಷ್ಟ್ರದ ಹಾದಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.