ADVERTISEMENT

ಬಾಹ್ಯಾಕಾಶ ನಿಲ್ದಾಣದಲ್ಲಿ ಸೌರ ಫಲಕ ಅಳವಡಿಸಲು ಸಿದ್ಧತೆ

ಏಜೆನ್ಸೀಸ್
Published 28 ಫೆಬ್ರುವರಿ 2021, 14:42 IST
Last Updated 28 ಫೆಬ್ರುವರಿ 2021, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಪ್‌ಕೆನವೆರಲ್‌, ಅಮೆರಿಕ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉನ್ನತ ಸಾಮರ್ಥ್ಯದ ಸೌರ ಫಲಕ ಅಳವಡಿಸಲು ಸಿದ್ಧತೆಗಳು ಆರಂಭವಾಗಿದೆ.

ನಾಸಾದ ಗಗನಯಾತ್ರಿಗಳಾದ ಕೇಟ್‌ ರೂಬಿನ್ಸ್‌ ಮತ್ತು ವಿಕ್ಟರ್‌ ಗ್ಲೋವರ್‌ ಅವರು ಭಾನುವಾರ ನಿಲ್ದಾಣದಿಂದ ಹೊರಬಂದು, ಬಾಹ್ಯಾಕಾಶ ನಡಿಗೆ ಮಾಡಿ ಸೌರ ಫಲಕಗಳನ್ನು ಅಳವಡಿಸಲು ಅಗತ್ಯವಿರುವ ಫ್ರೇಮ್‌ಗಳನ್ನು ಸ್ಥಾಪಿಸುವ ಕೆಲಸ ಕೈಗೊಂಡರು.

ಅಂತರರಾಷ್ಟ್ರಿಯ ಬಾಹ್ಯಾಕಾಶ ನಿಲ್ದಾಣಕ್ಕೆ ಈ ವರ್ಷದ ಕೊನೆಯಲ್ಲಿ ಅಧಿಕ ಸಾಮರ್ಥ್ಯದ ಆರು ಸೌರ ಫಲಕಗಳನ್ನು ತಲುಪಿಸಲು ನಾಸಾ ಯೋಜನೆ ರೂಪಿಸಿದೆ. ಹೆಚ್ಚಿನ ಸಂಖ್ಯೆಯ ಗಗನಯಾತ್ರಿಗಳಿಗೆ ಅವಕಾಶ ಮಾಡಲು ಮತ್ತು ಹೊಸ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ಬಾಹ್ಯಾಕಾಶ ನಿಲ್ದಾಣದಲ್ಲಿ ವಿದ್ಯುತ್‌ನ ಬೇಡಿಕೆ ಹೆಚ್ಚಿದೆ. ಆರು ಹೊಸ ಸೌರ ಫಲಕಗಳನ್ನು ಅಳವಡಿಸಿದರೆ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯವನ್ನು ಶೇ 30 ರಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ.

ADVERTISEMENT

ಈಗ ಇರುವ ಎಂಟು ಸೌರ ಫಲಕಗಳು 12 ರಿಂದ 20 ವರ್ಷಗಳಷ್ಟು ಹಳೆಯದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.