ADVERTISEMENT

ನಾಸಾ: ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸೌರಫಲಕ ಅಳವಡಿಕೆ

ಗಗನಯಾನಿಗಳಾದ ಥಾಮಸ್ ಪೆಸ್ಕೆಟ್– ಶೇನ್‌ ಕಿಮ್‌ಬ್ರೊ ಅವರಿಂದ ಯಶಸ್ಸಿ ಕಾರ್ಯಾಚರಣೆ

ಏಜೆನ್ಸೀಸ್
Published 20 ಜೂನ್ 2021, 14:00 IST
Last Updated 20 ಜೂನ್ 2021, 14:00 IST
ಗಗನಯಾನಿಗಳಾದ ಥಾಮಸ್ ಪೆಸ್ಕೆಟ್ ಹಾಗೂ ನಾಸಾದ ಶೇನ್‌ ಕಿಮ್‌ಬ್ರೊ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸೌರಫಲಕಗಳನ್ನು ಅಳವಡಿಸಿದರು –ಎಎಫ್‌ಪಿ ಚಿತ್ರ
ಗಗನಯಾನಿಗಳಾದ ಥಾಮಸ್ ಪೆಸ್ಕೆಟ್ ಹಾಗೂ ನಾಸಾದ ಶೇನ್‌ ಕಿಮ್‌ಬ್ರೊ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಹೊಸ ಸೌರಫಲಕಗಳನ್ನು ಅಳವಡಿಸಿದರು –ಎಎಫ್‌ಪಿ ಚಿತ್ರ   

ಕೇಪ್‌ ಕ್ಯಾನವೆರಲ್‌, ಅಮೆರಿಕ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ಧಾಣಕ್ಕೆ ವಿದ್ಯುತ್‌ ಪೂರೈಸಲು ಅಳವಡಿಸಲಾಗಿರುವ ಸೌರಫಲಕಗಳನ್ನು ಬದಲಾಯಿಸಿ, ಹೊಸ ಸೌರಫಲಕಗಳನ್ನು ಅಳವಡಿಸುವ ಕಾರ್ಯವನ್ನು ಇಬ್ಬರು ಗಗನಯಾನಿಗಳು ಭಾನುವಾರ ಪೂರ್ಣಗೊಳಿಸಿದರು.

ಕೆಲ ತಾಂತ್ರಿಕ ತೊಂದರೆಗಳ ಕಾರಣದಿಂದಾಗಿ ಸೌರಫಲಕಗಳ ಬದಲಾವಣೆ ಕಾರ್ಯವನ್ನು ಬುಧವಾರ ಅರ್ಧಕ್ಕೆ ನಿಲ್ಲಿಸಲಾಗಿತ್ತು.

ಗಗನಯಾನಿಗಳಾದ ಫ್ರಾನ್ಸ್‌ನ ಥಾಮಸ್ ಪೆಸ್ಕೆಟ್ ಹಾಗೂ ನಾಸಾದ ಶೇನ್‌ ಕಿಮ್‌ಬ್ರೊ ಅವರು ಅತ್ಯಾಧುನಿಕ ಸೌರಫಲಕಗಳನ್ನು ಅಳವಡಿಸಲು ಈ ಮೊದಲು ಪ್ರಯತ್ನಿಸಿದರು. ಆದರೆ, ಅವರು ಧರಿಸಿದ್ದ ದಿರಿಸು (ಸ್ಪೇಸ್‌ಸೂಟ್‌) ಒಡ್ಡಿದ ಹಾಗೂ ಇತರ ಸಮಸ್ಯೆಗಳಿಂದಾಗಿ ಫಲಕಗಳನ್ನು ಅಳವಡಿಸುವ ಕಾರ್ಯ ಪೂರ್ಣಗೊಂಡಿರಲಿಲ್ಲ.

ADVERTISEMENT

ಸೌರಶಕ್ತಿ ಚಾಲಿತ ವಿದ್ಯುತ್‌ ಉತ್ಪಾದನಾ ಘಟಕದ ಒಂದು ಭಾಗದಲ್ಲಿನ ಫಲಕವನ್ನು ಈ ಇಬ್ಬರು ಗಗನಯಾನಿಗಳು ಕಳೆದ ವಾರ ಬೇರ್ಪಡಿಸಿದ್ದರು. 63 ಅಡಿ ಉದ್ದದ ಹೊಸ ಸೌರಫಲಕವನ್ನು ಅಳವಡಿಸಿ, ವಿದ್ಯುತ್‌ ಮಂಡಲದ ಸಂಪರ್ಕವನ್ನು ಭಾನುವಾರ ಪೂರ್ಣಗೊಳಿಸಿದರು.

ಈ ಸೌರಫಲಕಗಳನ್ನು 20 ವರ್ಷಗಳ ಹಿಂದೆ ಅಳವಡಿಸಲಾಗಿತ್ತು. ಅಲ್ಲದೇ, ಈಗ ಬಾಹ್ಯಾಕಾಶದಲ್ಲಿ ನಡೆಸುವ ಪ್ರಯೋಗಗಳ ಸಂಖ್ಯೆಯೂ ಹೆಚ್ಚಾಗುತ್ತಿರುವ ಕಾರಣ ಹೆಚ್ಚಿನ ಪ್ರಮಾಣದ ವಿದ್ಯುತ್‌ನ ಅಗತ್ಯವಿತ್ತು. ಈ ಕಾರಣಕ್ಕಾಗಿ ಅತ್ಯಾಧುನಿಕ ಸೌರಫಲಕಗಳನ್ನು ಅಳವಡಿಸಲಾಗಿದೆ.

ಈ ಸೌರಫಲಕಗಳನ್ನು ಸ್ಪೇಸ್‌ಎಕ್ಸ್‌ ಕಂಪನಿ ಒದಗಿಸಿದೆ. ಮುಂದಿನ ವರ್ಷ ಎರಡು ಜೋಡಿ ಫಲಕಗಳನ್ನು ಸಹ ಕಂಪನಿ ಪೂರೈಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.