ADVERTISEMENT

ಜೇಮ್ಸ್‌ ವೆಬ್‌ ದೂರದರ್ಶಕ ಬಳಸಿ ಚಿಕ್ಕ ಕ್ಷುದ್ರಗ್ರಹ ಪತ್ತೆ ಮಾಡಿದ ವಿಜ್ಞಾನಿಗಳು

ಪಿಟಿಐ
Published 7 ಫೆಬ್ರುವರಿ 2023, 14:32 IST
Last Updated 7 ಫೆಬ್ರುವರಿ 2023, 14:32 IST
ನಾಸಾ
ನಾಸಾ   

ವಾಷಿಂಗ್ಟನ್: ನಾಸಾದ ‘ಜೇಮ್ಸ್ ವೆಬ್’ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿ ಯುರೋಪ್‌ನ ಖಗೋಳವಿಜ್ಞಾನಿಗಳು 100 ರಿಂದ 200 ಮೀಟರ್‌ ಉದ್ದವಿರುವ ಕ್ಷುದ್ರಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ.

ಈ ಕ್ಷುದ್ರಗ್ರಹದ ಗಾತ್ರವು, ರೋಮ್‌ನಲ್ಲಿರುವ ಕೊಲೊಸಿಯಂ ಬಯಲುರಂಗ ಮಂದಿರದಷ್ಟಿದೆ. ಜೇಮ್ಸ್‌ ವೆಬ್‌ ದೂರದರ್ಶಕ ಬಳಸಿ ಈವರೆಗೆ ಪತ್ತೆ ಹಚ್ಚಲಾಗಿರುವ ಆಕಾಶಕಾಯಗಳ ಪೈಕಿ ಇದು ಅತ್ಯಂತ ಚಿಕ್ಕದ್ದಾಗಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಗಳ ಹಾಗೂ ಗುರು ಗ್ರಹಗಳ ನಡುವೆ ಕಂಡುಬರುವ ಕ್ಷುದ್ರಗ್ರಹಗಳ ಗುಂಪುಗಳಲ್ಲಿ ಒಂದು ಕಿ.ಮೀ.ಗಿಂತಲೂ ಕಡಿಮೆ ಉದ್ದದ ಆಕಾಶಕಾಯಕ್ಕೂ ಇದು ಉದಾಹರಣೆ ಎನಿಸಬಹುದು ಎಂದಿದ್ದಾರೆ. ಈ ಕ್ಷುದ್ರಗ್ರಹ ಕುರಿತ ಅಧ್ಯಯನ ವರದಿಯು ‘ಆಸ್ಟ್ರೊನಾಮಿ ಅಂಡ್‌ ಆಸ್ಟ್ರೊಫಿಸಿಕ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ADVERTISEMENT

‘ಈ ಆಕಾಶಕಾಯದ ಸ್ವರೂಪ ಹಾಗೂ ಗುಣಲಕ್ಷಣಗಳ ಬಗ್ಗೆ ಇನ್ನಷ್ಟು ಅಧ್ಯಯನದ ಅಗತ್ಯವಿದೆ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.