ADVERTISEMENT

ವಿಶ್ವದ ಅತ್ಯಂತ ಹಳೆಯ ಡಿಎನ್‌ಎ ಗುರುತಿಸಿದ ವಿಜ್ಞಾನಿಗಳು

ಪಿಟಿಐ
Published 18 ಫೆಬ್ರುವರಿ 2021, 11:59 IST
Last Updated 18 ಫೆಬ್ರುವರಿ 2021, 11:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಸುಮಾರು 12 ಲಕ್ಷ ವರ್ಷಗಳಷ್ಟು ಹಳೆಯದಾದ ಬೃಹತ್‌ ಗಜದ ಪಳಯುಳಿಕೆಯಿಂದ ಡಿಎನ್‌ಎಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಇದು ಅಳಿವಿನಂಚಿನಲ್ಲಿರುವ ದೈತ್ಯ ಸಸ್ತನಿಯೊಂದು ಶೀತ ಹವಾಮಾನಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.

ಇದಕ್ಕೂ ಮೊದಲು ಅಂದರೆ 780–560 ಸಾವಿರ ವರ್ಷಗಳಷ್ಟು ಹಿಂದೆ ಲಭ್ಯವಾಗಿದ್ದ ಕುದುರೆಯ ತಳಿಯ ಡಿಎನ್ಎ ವಂಶವಹಿಯನ್ನೇ ಅತ್ಯಂತ ಹಳೆಯದು ಎನ್ನಲಾಗಿತ್ತು. ಈ ಕುರಿತ ಅಧ್ಯಯನ ಮಾಹಿತಿಯೊಂದು ನೇಚರ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಸ್ವಿಡನ್‌ನ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂನ ವಿಜ್ಞಾನಿಗಳೂ ಸೇರಿದಂತೆ ಸಂಶೋಧಕರ ಪ್ರಕಾರ, ಇದೇ ಮೊದಲ ಬಾರಿಗೆ 10 ಲಕ್ಷ ವರ್ಷಕ್ಕಿಂತ ಹಳೆಯದಾದ ಮಾದರಿ ಡಿಎನ್‌ಎ ವಂಶವಾಹಿಯನ್ನು ಗುರುತಿಸಿ ದೃಢಪಡಿಸಲು ಸಾಧ್ಯವಾಗಿದೆ.

ADVERTISEMENT

‘ಈ ಡಿಎನ್‌ಎ ನಿಜಕ್ಕೂ ನಂಬಲಾಗದಷ್ಟು ಹಳೆಯದು’ ಎಂದು ಸ್ವೀಡನ್‌ನ ಸ್ಟಾಕ್‌ಹೋಮ್‌ ಸೆಂಟರ್‌ ಫಾರ್‌ ಪ್ಯಾಲಿಯೋಜೆನೆಟಿಕ್ಸ್‌ನ ಹಿರಿಯ ಸಂಶೋಧಕ ಲವ್‌ ಡೇಲೆನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.